Wednesday, July 23, 2025

Latest Posts

ಸುಧಾಕರ್ ಶೆಟ್ಟಿ ಅರ್ಥಪೂರ್ಣ ಜನ್ಮದಿನದ ಆಚರಣೆ..!

- Advertisement -

State News: ಜೆಡಿಎಸ್‌ನ ರಾಜ್ಯ ಉಪಾಧ್ಯಕ್ಷರು ಹಾಗೂ ಜ್ಞಾನಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕರು ಆದ ಸುಧಾಕರ್ ಶೆಟ್ಟಿ ಅವರಿಗೆ 65ನೇ ಹುಟ್ಟುಹಬ್ಬದ ಸಂಭ್ರಮ. ರಾಜಕೀಯಕ್ಕೆ ಬರೋಕು ಮೊದಲಿನಿಂದಲೂ ಸಮಾಜಸೇವೆಯಲ್ಲಿ ನಿರತವಾಗಿರೋ ಸುಧಾಕರ್ ಶೆಟ್ಟರು, ಈ ಬಾರಿ ಕೂಡ ವಿಶಿಷ್ಠ ಮತ್ತು ಅರ್ಥಪೂರ್ಣವಾಗಿ ತಮ್ಮ ಜನುಮದಿನವನ್ನ ಆಚರಿಸಿಕೊಂಡಿದ್ದಾರೆ.

ತಮ್ಮದೇ ಅಮ್ಮ ಫೌಂಡೇಶನ್ ಮೂಲಕ ಶೃಂಗೇರಿ ಕ್ಷೇತ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೆಟ್ಟರು, ಪೈಪೋಟಿ ನೀಡಿ ಪರಾಜಿತರಾಗಿದ್ದರು. ಆದ್ರೆ ಸೋತೆ ಅಂತ ಕ್ಷೇತ್ರ ಬಿಟ್ಟಿಲ್ಲ. ಜನರ ಜೊತೆಯಲ್ಲೇ ಇದ್ದು, ತಮ್ಮ ಕ್ಷೇತ್ರದ ಜನರಿಗಾಗಿ ದುಡಿಯುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ರಕ್ತದಾನ ಶಿಬಿರ ಹಾಗು ಉಚಿತ ನೇತ್ರದಾನ ಶಿಬಿರವನ್ನು ಬಾಳೆಗಡಿ ಕೊಪ್ಪ ಕಛೇರಿಯಲ್ಲಿ ಆಯೋಜಿಸಿದ್ದರು.

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉಡುಪಿ ಹಾಗು ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶಿವಮೊಗ್ಗದ ನುರಿತ ವೈದ್ಯರ ತಂಡದೊಂದಿಗೆ ಜುಲೈ 6ರಂದು ಬೆಳಗ್ಗೆ 10ರಿಂದ ಮದ್ಯಾಹ್ನ 1.30 ರ ವರೆಗೆ ಉಚಿತ ಆೋಗ್ಯ ಶಿಬಿರವನ್ನು ಆಯೋಜಿಸಿದ್ದರು.

ಇನ್ನೂ ಫೌಂಡೇಶನ್ ಕಛೇರಿ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಂಡದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು.

ಒಟ್ಟಾರೆ ಆರೋಗ್ಯ ತಪಾಸಣ ಶಿಬಿರದಲ್ಲಿ ಉಚಿತ ನೇತ್ರ ತಪಾಸಣೆ, ಇಸಿಜಿ, ಬಿಪಿ ಚೆಕಪ್ ಮುಂತಾದ ಚಿಕಿತ್ಸೆಗಳನ್ನು ಕೂಡಾ ನೀಡಲಾಯಿತು. ಕ್ಷೇತ್ರದ ಸಾಕಷ್ಟು ಜನರು ಈ ಶಿಬಿರದ ಪ್ರಯೋಜನ ಪಡೆದರು. ಒಟ್ಟಿನಲ್ಲಿ ಸಮಾಜಸೇವೆಯಲ್ಲೇ ತಮ್ಮನ್ನ ಹೆಚ್ಚಾಗಿ ತೊಡಗಿಸಿಕೊಂಡಿರುವ ಸುಧಾಕರ ಶೆಟ್ಟರ 65ನೇ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಲಾಯ್ತು.

ಶಕ್ತಿ ಯೋಜನೆಯಿಂದ ಆಟೋ ಚಾಲಕರು ಕಂಗಾಲು

ಹುಬ್ಬಳ್ಳಿಯಲ್ಲಿ ಯೂತ್ ಕಾಂಗ್ರೆಸ್ ನಿಂದ ಪ್ರತಿಭಟನೆ..!

ಕರಾವಳಿ ಮಳೆ ಹಾನಿಗೆ ಕೂಡಲೇ ಪರಿಹಾರ ಸೂಚಿಸುವಂತೆ ಸಿಎಂ ಸೂಚನೆ..!

- Advertisement -

Latest Posts

Don't Miss