ಡಾ.ಸುಧಾಕರ್ ಪತ್ನಿ ಮತ್ತು ಪುತ್ರಿಗೂ ಕೊರೊನಾ ಪಾಸಿಟಿವ್..!

ಡಾ.ಕೆ.ಸುಧಾಕರ್ ಮನೆಯಲ್ಲಿ ಸಚಿವರ ಅಪ್ಪ, ಪತ್ನಿ, ಪುತ್ರಿ ಮತ್ತು ಮನೆಕೆಲಸದವರಿಗೂ ಕೊರೊನಾ ಸೋಂಕು ತಗುಲಿದೆ. ಮನೆಯಲ್ಲಿರುವ 7 ಜನರಲ್ಲಿ 4 ಜನರಿಗೆ ಕೊರೊನಾ ಇರುವುದು ಧೃಡಪಟ್ಟಿದೆ.

ನಿನ್ನೆ ಸುಧಾಕರ್ ಅವರ ಮನೆಗೆಲಸದವನಿಗೆ ಕೊರೊನಾ ಇರುವುದು ಧೃಪಟ್ಟಿತ್ತು. ಬಳಿಕ ಸುಧಾಕರ್ ತಂದೆಯವರಿಗೆ ಕೊರೊನಾ ಇರುವುದನ್ನ ಸ್ವತಃ ಸಚಿವರೇ ಟ್ವೀಟ್ ಮೂಲಕ ತಿಳಿಸಿದ್ದರು. ಇದೀಗ ಪತ್ನಿ ಮತ್ತು ಪುತ್ರಿಗೆ ಸೋಂಕಿರುವುದು ಗೊತ್ತಾಗಿದೆ. ಇನ್ನು ಕೊರೊನಾ ಟೆಸ್ಟ್‌ನಲ್ಲಿ ಸುಧಾಕರ್, ಮತ್ತು ಅವರ ಇಬ್ಬರು ಪುತ್ರರಿಗೆ ನೆಗೆಟಿವ್ ಇರುವುದು ಗೊತ್ತಾಗಿದೆ.

ಈ ಬಗ್ಗೆಯೂ ಟ್ವೀಟ್ ಮಾಡಿರುವ ಡಾ.ಕೆ.ಸುಧಾಕರ್, ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗೂ ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೊನಾ ನೆಗೆಟಿವ್ ಬಂದಿದ್ದು, ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.

https://youtu.be/RQ46o4h2TL4

About The Author