ತಿರುಪತಿ: ಇನ್ಪೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳು 1.25 ಕೋಟಿ ಮೌಲ್ಯದ ಚಿನ್ನವನ್ನು ಸೋಮವಾರ ತಿರುಪತಿ ತಿಮ್ಮಪ್ಪನಿಗೆ ದೇಣಿಗೆ ನೀಡಿದರು. ಇನ್ನುಈ ದೇಣಿಗೆಯನ್ನು ರಂಗ ನಾಯಕ ಮಂಡಲ ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿರುವ ಎ ವಿ ಧರ್ಮರೆಡ್ಡಿಯವರಿಗೆ ಚಿನ್ನದಿಂದ ಮಾಡಿದ ಶಂಖ ಮತ್ತು ಕೂರ್ಮ ಪೀಠವನ್ನು ದೇಣಿಗೆ ರೂಪದಲ್ಲಿ ನೀಡಿದರು
ಈ ಹಿಂದೆ ಸುಧಾ ಮೂರ್ತಿಯವರು ಟಿಟಿಡಿ ಆಡಳಿತ ಮಂಡಳಿಯ ಸದಸ್ಯರು ಆಗಿದ್ದರು ಬಾಲಾಜಿ ಸನ್ನಿದಾನಕ್ಕೆ ಈ ದಂಪತಿಗಳು ನೀಡಿರುವ ಶಂಖ ಮತ್ತು ಆಮೆಯನ್ನು ತಿಮ್ಮಪ್ಪನ ಅಭಿಷೇಕಕ್ಕೆ ಬಳೆಸಲಾಗುವುದು ಎಂದು ವರದಿಯಾಗಿದೆ.ಆಂದ್ರ ಪ್ರದೇಶದ ಸರ್ಕಾರದ ಸಲಹೆಗಾರ ಎಸ್ ರಾಜಿವ್ ಕೃಷ್ಣ ಟ್ವಿಟರ್ ನಲ್ಲಿ ನಾರಾಯಣ ಮೂರ್ತಿ ದಂಪತಿಗಳ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ.
ಇನ್ನು ನಾರಾಯಣ ಮೂರ್ತಿ ದಂಪತಿಗಳು ದಾನ ಧರ್ಮಗಳಲ್ಲಿ ಸದಾ ಮುಂದಿರುತ್ತಾರೆ ಅವರಿಗೆ ದೇವರು ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾನೆ ಎಂದು ಬರೆದಿದ್ದಾರೆ.ಎಸ್ ರಾಜೀವ್ ಕೃಷ್ಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ಧಾರೆ.