Tuesday, October 7, 2025

Latest Posts

ಬೆಂಕಿ ಹಚ್ಚಿದ ಕಾಕ್ರೋಚ್‌ ಸುಧಿ : ಬಿಗ್ ಬಾಸ್ ಮನೆ ಧಗಧಗ !

- Advertisement -

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಎಲ್ಲ ಕಡೆ ಸದ್ದುಮಾಡುತ್ತಿದೆ. ಪ್ರತಿ ಸೀಸನ್‌ನ ಬಿಗ್‌ ಬಾಸ್‌ ನಲ್ಲೂ ಒಂದು ವಾರ ಆದ ನಂತರ ಅಥವಾ ಸ್ವಲ್ಪ ತಡವಾಗಿ ಕಿರಿಕ್‌ಗಳು, ಜಗಳಗಳು ಆಗುತ್ತಾ ಇತ್ತು. ಆದರೆ, ಈ ಬಾರಿ ಬಿಗ್‌ ಬಾಸ್‌ ನಲ್ಲಿ ಮೊದಲ ವಾರವೇ ಕಿಡಿ ಹೊತ್ತಿಕೊಂಡಿದೆ. ನಾವು ನೀವು ಬೆಸ್ಟ್‌ ಫ್ರೆಂಡ್ಸ್‌ ಎಂದು ಹೇಳಿಕೊಂಡವರ ಮಧ್ಯೆಯೇ ಕಿರಿಕ್‌ ಸ್ಟಾರ್ಟ್‌ ಆಗಿದೆ. ಜಗಳದ ಕಾವು ಕೂಡ ಬಹಳ ಜೋರಾಗಿದೆ.

ಮೊದಲ ವಾರ ಜಂಟಿ ಮತ್ತು ಒಂಟಿ ಎಂಬ ಎರಡು ತಂಡಗಳನ್ನು ರಚಿಸಲಾಗಿದೆ. ಎರಡೂ ತಂಡಗಳ ಮಧ್ಯೆ ಟಾಸ್ಕ್‌ ಏರ್ಪಡಿಸಲಾಗುತ್ತಿದೆ. ಈಗ ಮೂರನೇ ವಾರದಲ್ಲಿ ನಡೆಯುವ ಫಿನಾಲೆಗೆ ಫೈನಲಿಸ್ಟ್‌ ಆಯ್ಕೆ ಮಾಡಲು ಟಾಸ್ಕ್‌ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್‌ ಗೆ ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಉಸ್ತುವಾರಿಯಾಗಿದ್ದರು. ಉಸ್ತುವಾರಿ ಮಾಡುವಾಗ ನಡೆದ ತಪ್ಪಿನಿಂದ ಇಡೀ ಮನೆ ಅಲ್ಲೋಲ್ಲ ಕಲ್ಲೋಲ ಆಗಿ ಜಗಳ ಶುರುವಾಗಿದೆ.

ಟಾಸ್ಕ್‌ ನಡೆಯುವ ಸಂದರ್ಭದಲ್ಲಿ ಉಸ್ತುವಾರಿಗಳು ತೆಗೆದುಕೊಂಡ ನಿರ್ಧಾರದ ಬಗ್ಗೆ ಪ್ರಶ್ನೆ ಮೂಡಿದೆ. ಈ ಬಗ್ಗೆ ಬಗ್‌ ಬಾಸ್‌ ಕೂಡ ಪ್ರಶ್ನೆ ಮಾಡಿದರು. ಆ ಬಳಿಕ ಉಸ್ತುವಾರಿಗಳು ಗೊಂದಲಕ್ಕೆ ಸಿಲುಕಿದರು. ನಿಯಮ ಉಲ್ಲಂಘನೆ ಆಗಿರೋದು ಸ್ಪಷ್ಟವಾಗಿತ್ತು. ಮುಂದೇನು ಮಾಡಬೇಕು ಎಂಬುದು ತಿಳಿಯದೇ ಎಲ್ಲರೂ ಕಂಗಾಲಾದರು. ಆಗ ಧನುಷ್ ಹಾಗೂ ಕಾಕ್ರೋಚ್‌ ಸುಧಿ ಮಧ್ಯೆ ಕಿರಿಕ್ ಆಗಿದೆ.

ಸುಧಿ ಅವರು ತಮಗೆ ಆಟದಲ್ಲಿ ಮತ್ತೆ ಅವಕಾಶ ನೀಡಬೇಕು ಎಂದು ಹೇಳಿದರು. ಆದರೆ, ಉಸ್ತುವಾರಿಗಳು ಇದಕ್ಕೆ ಸಿದ್ಧರಿಲ್ಲ. ಅತ್ತ ಧನುಷ್ ಕೂಡ ಈ ಬಗ್ಗೆ ಬೇಸರ ಹೊರಹಾಕಿದರು. ಸುಧಿಗೆ ಮತ್ತೆ ಅವಕಾಶ ನೀಡಿದರೆ ನನಗೆ ಮೋಸ ಆಗುತ್ತದೆ ಎಂದು ವಾದ ಮುಂದಿಟ್ಟರು. ಆ ಬಳಿಕ ಅಶ್ವಿನಿ ಹಾಗೂ ಕಾವ್ಯಾ ಶೈವ ಬಳಿ ಜೋರು ಜೋರಾಗಿಯೇ ಕೂಗಾಡಿಬಿಟ್ಟರು. ಇದರಿಂದ ಇಡೀ ಮನೆಯಲ್ಲಿ ಅಶಾಂತಿ ಮೂಡಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss