Cracked Heels:
ಚಳಿಗಾಲದಲ್ಲಿ ಹಿಮ್ಮಡಿ ಒಡೆದಿರುವುದು, ಕೂದಲಿನ ಸಮಸ್ಯೆ, ಚರ್ಮದ ಸಮಸ್ಯೆಗಳು ಸಾಮಾನ್ಯ. ಇವುಗಳಲ್ಲಿ ಒಡೆದ ಹಿಮ್ಮಡಿಗಳು ಅತ್ಯಂತ ನೋವಿನಿಂದ ಕೂಡಿರುತ್ತದೆ. ಸರಿಯಾಗಿ ಕಾಳಜಿ ವಹಿಸದಿದ್ದರೆ, ಸಮಸ್ಯೆ ತೀವ್ರ ವಾಗುತ್ತದೆ..ಆದರೆ ಮನೆಯಲ್ಲಿಯೇ ,ಚಳಿಗಾಲದಲ್ಲಿ ನಮ್ಮನ್ನು ಕಾಡುವ ಹಿಮ್ಮಡಿ ಒಡೆದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಒಡೆದ ಹಿಮ್ಮಡಿಗಳನ್ನು ತೊಡೆದುಹಾಕಲು ಕೆಲವು ಮನೆಮದ್ದುಗಳು ಉಪಯೋಗಿಸಬೇಕು. ಒಡೆದ ಹಿಮ್ಮಡಿಗಳನ್ನು ಯಾವುದೇ ಆರ್ಥಿಕ ಹೊರೆಯಿಲ್ಲದೆ ಸುಲಭ ರೀತಿಯಲ್ಲಿ ಗುಣಪಡಿಸಲು ಯಾವ ಮನೆಮದ್ದುಗಳು ಉಪಯುಕ್ತವಾಗಿವೆ ಎಂಬುದನ್ನು ತಿಳಿದುಕೊಳ್ಳೋಣ .
ಜೇನುತುಪ್ಪ:
ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ಜೇನುತುಪ್ಪವನ್ನು ಸ್ಕ್ರಬ್ ಮತ್ತು ಪಾದದ ಮಾಸ್ಕ್ ಆಗಿ ಬಳಸಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಪರಿಣಾಮವಾಗಿ ಇದು ಪಾದದ ಸೋಂಕನ್ನು ಸಹ ದೂರ ಇಡುತ್ತದೆ. ಇದು ಪಾದಗಳನ್ನು ತೇವವಾಗಿಡುತ್ತದೆ.
ತೆಂಗಿನೆಣ್ಣೆ:
ತೆಂಗಿನೆಣ್ಣೆಯಲ್ಲಿ ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳಿದೆ. ತೆಂಗಿನ ಎಣ್ಣೆಯು ಮಾಯಿಶ್ಚರೈಸಿಂಗ್ ಏಜೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಸೋಂಕುಗಳನ್ನೂ ದೂರ ಮಾಡುತ್ತದೆ .
ಅಲೋವೆರಾ:
ಒಡೆದ ಹಿಮ್ಮಡಿಗಳಿಗೂ ಅಲೋವೆರಾ ಜೆಲ್ ಅನ್ನು ಬಳಸಬಹುದು. ಅದಕ್ಕಾಗಿ ಪಾದಗಳನ್ನು ಸರಿಯಾಗಿ ತೊಳೆದು ನಂತರ ಅಲೋವೆರಾ ಜೆಲ್ ಅನ್ನು ಪಾದಗಳಿಗೆ ಹಚ್ಚಿಕೊಳ್ಳಿ. ನಂತರ ಸ್ವಲ್ಪ ಹೊತ್ತು ಮಸಾಜ್ ಮಾಡಿ. ರಾತ್ರಿಯಿಡೀ ಹೀಗೆಯೇ ಬಿಡಿ. ಹೀಗೆ ಮಾಡುವುದರಿಂದ ನೀವು ತ್ವರಿತ ಫಲಿತಾಂಶಗಳನ್ನು ಪಡೆಯುತ್ತೀರಿ.
ಗ್ಲಿಸರಿನ್:
ಒಡೆದ ಹಿಮ್ಮಡಿಗಳನ್ನು ಹೋಗಲಾಡಿಸಲು ಗ್ಲಿಸರಿನ್ ಸಹ ಉಪಯುಕ್ತವಾಗಿದೆ. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ನಿಂಬೆ ರಸವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಗ್ಲಿಸರಿನ್ ಮತ್ತು ಒಂದು ಚಮಚ ರೋಸ್ ವಾಟರ್ ಸೇರಿಸಿ. ಇವೆಲ್ಲವನ್ನೂ ಮಿಶ್ರಣ ಮಾಡಿ ಹಿಮ್ಮಡಿಗಳ ಮೇಲೆ ಹಚ್ಚಿ. ರಾತ್ರಿಯಿಡೀ ಬಿಡಿ ಮತ್ತು ಬೆಳಿಗ್ಗೆ ನಿಮ್ಮ ಪಾದಗಳನ್ನು ತೊಳೆಯಿರಿ. ಈ ಮಾಸ್ಕ್ ನಿಮ್ಮ ಪಾದಗಳನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.
ಅಕ್ಕಿ ಹಿಟ್ಟು:
ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಇವೆರಡನ್ನು ಚೆನ್ನಾಗಿ ಸ್ಕ್ರಬ್ ಮಾಡಿ. ಬಳಿಕ ತೊಳೆಯಿರಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಹೀಗೆ ಮಾಡಿದರೆ ಫಲಿತಾಂಶ ಸಿಗುತ್ತದೆ.
ಬಾಳೆಹಣ್ಣು:
ಒಂದು ಬಟ್ಟಲಿನಲ್ಲಿ ಅರ್ಧ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಒಡೆದ ಹಿಮ್ಮಡಿಗಳ ಮೇಲೆ ಸ್ವಲ್ಪ ಹೊತ್ತು ಇಡಿ. ಇದರ ನಂತರ ತಣ್ಣನೆ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಪಾದಗಳಲ್ಲಿನ ಬಿರುಕುಗಳು ಮಾಯವಾಗುತ್ತವೆ.