ಅನನ್ಯಾ ಭಟ್ ಪ್ರಕರಣದಲ್ಲಿ ಸುಜಾತ ಭಟ್ ದೂರಿನ ಹಿಂದೆ, ದಕ್ಷಿಣ ಭಾರತದ ಖ್ಯಾತ ನಟರೊಬ್ಬರ ಸಹೋದರನ ಲಿಂಕ್ ಇರುವ ಬಗ್ಗೆ ಅನುಮಾನ ಮೂಡಿದೆ. ವಾಸಂತಿ ಕೇಸ್ ತನಿಖೆಗೆ ಇಳಿದಾಗ ಆ ಹೆಸರು ಉಲ್ಲೇಖವಾಗಿದ್ದು, ಎಸ್‌ಐಟಿ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದೆ.
ಈತ ಕೂಡ ಕಾಲಿವುಡ್ ಖ್ಯಾತ ನಟರಾಗಿದ್ದು, ತಮಿಳುನಾಡಿನ ಚೆನ್ನೈನಲ್ಲಿ ವಾಸ ಮಾಡ್ತಿದ್ದಾರೆ ಎನ್ನಲಾಗಿದೆ. ನಟನ ಚೆನ್ನೈ ವಿಳಾಸ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ವಿಳಾಸ ಸಿಗದಿದ್ದಕ್ಕೆ ನೋಟಿಸ್ ನೀಡುವುದು ವಿಳಂಬವಾಗ್ತಿದೆ. ಶೀಘ್ರವೇ ನೋಟಿಸ್ ಕೊಟ್ಟು ವಿಚಾರಣೆ ಮಾಡುವ ಸಾಧ್ಯತೆ ಇದೆ.
ಈ ಕೇಸ್‌ನಲ್ಲಿ ಅನನ್ಯಾ ಭಟ್ ಮತ್ತು ವಾಸಂತಿ ಕೇಸ್‌ನಲ್ಲಿ, ನಟನ ಸಹೋದರನ ಹೆಸರು ಕೇಳಿ ಬಂದಿದೆ. ಹೀಗಾಗಿ ಹೇಳಿಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಆದ್ರೆ, ನಟನ ತಮ್ಮನಿಗೂ ಈ ಕೇಸ್‌ಗೂ ಏನು ಸಂಬಂಧ ಇದೆ ಅನ್ನೋದು ಗೊತ್ತಾಗಿಲ್ಲ. ತನಿಖೆಯಿಂದಷ್ಟೇ ತಿಳಿಯಬೇಕಿದೆ.