Wednesday, September 3, 2025

Latest Posts

ಬಿಗ್‌ಬಾಸ್‌ಗೆ ಸುಜಾತ ಭಟ್‌ ಇದು ಪಕ್ಕಾ ಮಾಹಿತಿ!

- Advertisement -

ಧರ್ಮಸ್ಥಳಕ್ಕೆ ಹೋಗಿದ್ದ ತಮ್ಮ ಮಗಳು ಕಾಣೆಯಾಗಿದ್ದಾಳೆ. ಹೀಗೆಂದು ದೂರು ಕೊಟ್ಟ ಎಲ್ಲರೂ ದಂಗಾಗುವಂತೆ ಮಾಡಿದ್ದವರು ಸುಜಾತ ಭಟ್. ಇದೇ ಸುಜಾತ ಭಟ್ ಈಗ ಮತ್ತೊಂದು ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್‌ ಬಾಸ್ ಸೀಸನ್ 12ರ ಸ್ಪರ್ಧಿಗಳಲ್ಲಿ ಸುಜಾತ ಭಟ್ ಹೆಸರು ಕೇಳಿ ಬರುತ್ತಿದೆ. ನಿಜಕ್ಕೂ ಇದು ಆಶ್ಚರ್ಯಕರವಾದ ಸುದ್ದಿಯಾಗಿದೆ.

ಅನನ್ಯ ಭಟ್, ಎಂಬಿಬಿಎಸ್‌ಗೆ ಅಡ್ಮಿಷನ್ ಪಡೆದಿದ್ದ ವಿದ್ಯಾರ್ಥಿನಿ. ಆಕೆ ಎಲ್ಲಿ ಹೋದಳು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ನನ್ನ ಮಗಳನ್ನು ಹುಡುಕಿ ಕೊಡಿ ಎಂದು ಅಳುತ್ತಾ, ಪ್ರಮಾಣವಿಟ್ಟು ಜನರ ಮುಂದೆ ನಿಂತವರು ಸುಜಾತ ಭಟ್. ಆದರೆ, ಪ್ರಕರಣ ತೀವ್ರಗೊಂಡಂತೆ ದಿನಕ್ಕೊಂದು ಟ್ವಿಸ್ಟ್. ಸುಜಾತ ಭಟ್ ತೋರಿಸಿದ ಫೋಟೋ ಇನ್ನೊಬ್ಬಳದ್ದು ವಾಸಂತಿ ಎನ್ನುವರದ್ದು ಎಂದು ವಾಸಂತಿಯ ಸಹೋದರರು ಆರೋಪಿಸಿದರು. ಈ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಇದೇ ಸೆಪ್ಟೆಂಬರ್ 28ರಂದು ಪ್ರಾರಂಭಗೊಳ್ಳಲಿರುವ ಬಿಗ್‌ ಬಾಸ್ ಸೀಸನ್ 12ಗೆ ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ. ಹೊಸ ಲೋಗೋ ಈಗಾಗಲೇ ಬಿಡುಗಡೆ ಆಗಿದೆ. ಆದರೆ ಎಲ್ಲರಿಗೂ ಕುತೂಹಲ ಈ ಬಾರಿ ಯಾರು ದೊಡ್ಮನೆಯ ಕಂಟೆಸ್ಟೆಂಟ್ ಆಗುತ್ತಾರೆ ಅನ್ನೋದು. ಇದೀಗ ಕೇಳಿಬರುತ್ತಿರುವ ಸುದ್ದಿ ಏನೆಂದರೆ ಅನನ್ಯ ಪ್ರಕರಣದಿಂದ ಹೆಸರಾಗಿರುವ ಸುಜಾತ ಭಟ್‌ಗೆ ಬಿಗ್‌ ಬಾಸ್ ಆಫರ್ ಬಂದಿದೆಯಂತೆ. ಸುಜಾತ ಭಟ್ ನಿಜವಾಗಿಯೂ ಮನೆಯಲ್ಲಿ ಕಾಲಿಡ್ತಾರಾ? ಇದು ಎಲ್ಲರ ಮನದಲ್ಲೂ ಹುಟ್ಟಿದ ಪ್ರಶ್ನೆ.

ಸಾಮಾನ್ಯವಾಗಿ ಸಿನಿಮಾ ಕಲಾವಿದರು, ಕ್ರಿಕೆಟಿಗರು, ಇನ್ಫ್ಲುಯೆನ್ಸರ್‌ಗಳು ಬಿಗ್‌ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಈ ಬಾರಿ ಪ್ರಕರಣದಲ್ಲಿ ವಿವಾದಾತ್ಮಕವಾಗಿ ಹೆಸರಾಗಿರುವ ಸುಜಾತ ಭಟ್‌ಗೇ ಆಫರ್ ಬಂದಿದೆಯೇ ಎಂಬುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಅವರು ಮನೆಯಲ್ಲಿ ಬಂದರೆ ಡ್ರಾಮಾ ಖಚಿತ ಎನ್ನುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಮಗಳ ವಿಷಯ ಇನ್ನೂ ಬಗೆಹರಿದಿಲ್ಲ, ಇಂಥ ಸಮಯದಲ್ಲಿ ಶೋನಲ್ಲಿ ಪಾಲ್ಗೊಳ್ಳೋದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss