ಮಂಡ್ಯ: ಮಂಡ್ಯದಲ್ಲಿ ಮೈ ಶುಗರ್ ಕಂಪನಿ ತೆರೆಯುವ ಬಗ್ಗೆ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಇದು ರೈತರಿಗೆ ಸಂಬಂಧಿಸಿದ್ದು, ರೈತರಿಗೆ ಒಳ್ಳೆಯದು ಆಗಬೇಕು ಎನ್ನುವುದು ನನ್ನ ನಿಲುವು ಎಂದಿದ್ದಾರೆ.
ಮೈಶುಗರ್ ಕಾರ್ಖಾನೆಗೆ ಮಹತ್ವದ ಇತಿಹಾಸ ಇದೆ. ಇವತ್ತಿನ ದಿನ ನಿರ್ಧಾರ ತೆಗೆದುಕೊಂಡರೆ ಅಷ್ಟೇ ಐತಿಹಾಸಿಕ ನಿರ್ಧಾರವಾಗುತ್ತೆ. ಹಲವಾರು ವರ್ಷಗಳಿಂದ ಸರ್ಕಾರ ಬದಲಾದ್ರು, ಮೈಶುಗರ್ ಕಾರ್ಖಾನೆಯ ಸಮಸ್ಯೆ ಬಗೆಹರಿದಿಲ್ಲಾ ಎಂದರು.

ಅಲ್ಲದೇ, ಇವತ್ತು ಮುಖ್ಯಮಂತ್ರಿಗಳು ಧೃಡ ನಿರ್ಧಾರ ತೆಗೆದುಕೊಂಡಿದ್ದಾರೆ. ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಬಹಳ ಆಸಕ್ತಿ ತೆಗೆದುಕೊಂಡು ಮಂಡ್ಯಕ್ಕೆ ಮಂಡ್ಯ ರೈತರಿಗೆ ಒಳ್ಳೆಯದು ಆಗಬೇಕೆಂದು ನಿಲುವು ತೆಗೆದುಕೊಂಡಿದ್ದಾರೆ. ಕಬ್ಬು ಕಟಾವು ಸರಿಯಾದ ಸಮಯಕ್ಕೆ ಆಗಬೇಕು.
ರೈತರಿಗೆ ಅನುಕೂಲವಾಗುವುದಕ್ಕೆ ಯಾವ ರೀತಿ ಮಾಡಬೇಕು ಎನ್ನುವ ನಿರ್ಧಾರ ಸಭೆಯಲ್ಲಿ ನಡಿತಿದೆ. ಈಗ ಒಂದು ಹಂತಕ್ಕೆ ಬಂದಿದೆ. ಅದಕ್ಕೂ ವಿರೋಧ ವ್ಯಕ್ತಪಡಿಸೋರು ಇದ್ದಾರೆ. ಅದನ್ನ ಯಾರು ಕೂಡ ಮಾಡಬೇಡಿ. ರೈತರ ಧ್ವನಿಯನ್ನ ನಾವು ಕೆಳಬೇಕಾಗಿರುವುದು. ಇಲ್ಲಿ ರಾಜಕಾರಣ, ಪಕ್ಷ, ಶಾಸಕರೆಂಬ ಬೇಧ ಭಾವವಿಲ್ಲ ಎಂದಿದ್ದಾರೆ.