- Advertisement -
www.karnatakatv.net: ಮಂಡ್ಯ: ಗಣಿ ವಿಚಾರವಾಗಿ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಬೇಸತ್ತಿರುವಂತೆ ಕಾಣುತ್ತಿದೆ. ಸುಮಲತಾ ಮಾಡಿರುವ ಆರೋಪಗಳಿಗೆ ಕೈ ಮುಗಿದಿದ್ದಾರೆ. ಅಂಬರೀಶ್ ಹೆಸರು ತೆಗೆದು ಮಾತನಾಡಿದರೆ ಮಣ್ಣಾಗುತ್ತಾರೆ ಎಂಬ ಸುಮಲತಾ ಹೇಳಿಕೆಗೆ ಗರಂ ಆದ ಹೆಚ್ಡಿಕೆ ಮಣ್ಣಾಗುವುದು ನಾನಲ್ಲ, ಅವರು. ಕೈ ಮುಗಿದು ಅವರ ಬಗ್ಗೆ ಕೇಳಲೇ ಬೇಡಿ ಎಂಬಂತೆ ಸನ್ನೆ ಮಾಡಿದರು. ಬೇರೆ ಮಹಿಳೆಯರ ಬಗ್ಗೆ ಬೇಕಾದರೆ ಚರ್ಚೆ ಮಾಡೋಣ ಎಂದರು. ಕೆ. ಆರ್. ಎಸ್. ಡ್ಯಾಂಗೆ ಇನ್ನು ನೂರು ವರ್ಷವಾದ್ರು ಏನೂ ಆಗಲ್ಲ. ಈ ಬಗ್ಗೆ ಎಂಜಿನಿಯರ್ ಗಳೇ ಸ್ಪಷ್ಟ ಪಡಿಸಿದ್ದಾರೆ ಎಂದು ಸಂಸದೆ ವಿರುದ್ಧ ಗುಡುಗಿದ್ದಾರೆ.
- Advertisement -

