- Advertisement -
www.karnatakatv.net: ಮಂಡ್ಯ: ಗಣಿ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ ವಿಚಾರವಾಗಿ ಸುಮಲತಾ ವಿರುದ್ಧವಾಗಿ ಹೇಳಿಕೆಗಳನ್ನ ರವೀಂದ್ರ ಶ್ರೀಕಂಠಯ್ಯ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ, ರವೀಂದ್ರ ಶ್ರೀಕಂಠಯ್ಯ ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳುತ್ತಾರೆ. ನಾನು ಗಣಿ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಈ ರೀತಿ ಹೇಳುತ್ತಿದ್ದಾರೆ. ಮಂಡ್ಯದಲ್ಲಿ ಭ್ರಷ್ಟಾಚಾರದ ಕಾಂಟ್ರಾಕ್ಟ್ ತೆಗೆದುಕೊಂಡಿದ್ದಾರೆ. ಸಿಬಿಐ ಅಧಿಕಾರಿಗಳು ತೋರಿಸಿದ ದಾಖಲೆ ನೋಡಿ ಶಾಕ್ ಆಗಿದೆ. ಇದನ್ನೆಲ್ಲಾ ರಾಜ್ಯದ ಮುಂದೆ ತೆರೆದಿಟ್ಟರೆ ಇಡೀ ರಾಜ್ಯವೇ ತಲ್ಲಣವಾಗುತ್ತದೆ. ಹೀಗೆ ಮಾಡಿ ಡಿಸಿ ರೋಹಿಣಿ ಅವರನ್ನ ಎಲ್ಲಾ ಪಕ್ಷದ ನಾಯಕರು ಸೇರಿ ವರಗಾವಣೆ ಮಾಡಿಸಿದರು. ಮಹಿಳೆಯರ ಬಗ್ಗೆ ಉದ್ದುದ್ದ ಭಾಷಣ ಮಾಡುವ ಇವರು ಇದೆನಾ ಓರ್ವ ಮಹಿಳಾ ಅಧಿಕಾರಿಗೆ ತೋರುವ ಗೌರವ ಎಂದು ಕಿಡಿ ಕಾರಿದರು.
- Advertisement -