ಮಂಡ್ಯ: ಮೈಶುಗರ್ ಸಕ್ಕರೆ ಕಾರ್ಖಾನೆ ಮೇಲೆ ರಾಕ್ ಲೈನ್ ಕಣ್ಣು ಎಂಬ ವಿಷಯದ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಷ್, ಮೈಶುಗರ್ ಕಾರ್ಖಾನೆ ವಿಚಾರವಾಗಿ ಆಪಾದನೆ ಮಾಡ್ತಿದ್ದಾರೆ ಎಂದಿದ್ದಾರೆ.
ನನ್ನ ಮೇಲೆ ಪರ್ಸನಲ್ ಟಾರ್ಗೆಟ್ ಮಾಡಿದ್ದಾರೆ. ನಾನು ತಲೆ ಕೆಡಿಸಿಕೊಳ್ಳಲ್ಲಾ. ಚುನಾವಣೆ ಯಾವ ರೀತಿ ನಡೆದಿದೆ ಎಂದು ನಿಮಗೆ ಗೊತ್ತಿದೆ ಅವಾಗ್ಲೆ ನಾವು ತಲೆಕೆಡಿಕೊಂಡಿಲ್ಲಾ ಎಂದಿದ್ದಾರೆ.
ನನ್ನ ಜೋತೆ ದರ್ಶನ್ ಯಶ್ ಬಂದ್ರು ಅವರನ್ನು ಟಾರ್ಗೆಟ್ ಮಾಡಿದ್ರು. ಇವತ್ತು ನನ್ನ ಹಿತೈಷಿಗಳು ಯಾರಾದ್ರು ಬಂದ್ರೆ, ಅವರಿಗೆ ಕಾರ್ಖಾನೆ ಮೇಲೆ ಕಣ್ಣಿದೆ ಎಂದು ಸುಳ್ಳು ಸುದ್ದಿಗಳ ಮಾತಾಡುತ್ತಿದ್ದಾರೆ ಎಂದು ಸುಮಲತಾ ಆರೋಪಿಸಿದ್ದಾರೆ .
ನಿಜಕ್ಕೂ ಇಂತಹ ತುಚ್ಛವಾದ ಭಾವನೆಗಳು ನಮ್ಮಲ್ಲೋ ಅಥವಾ ನಮ್ಮ ಆಪ್ತರಲ್ಲೋ ಯಾರಿಗೂ ಇಲ್ಲಾ. ದೇವರ ದಯೆಯಿಂದ ಅವರೆಲ್ಲಾರು ಚೆನ್ನಾಗಿದ್ದಾರೆ. ಅವರವರ ಬಿಸಿನೆಸ್ ಗಳಲ್ಲಿ, ಅವರ ಸಿನಿಮಾ ಪ್ರೊಡಕ್ಷನ್ ಗಳಲ್ಲಿ ತುಂಬಾ ಚೆನ್ನಾಗಿದ್ದಾರೆ. ನೂರಾರು ಜನಕ್ಕೆ ಕೆಲಸ ಕೊಟ್ಟು ಅವರಿಗೆ ಜೀವನಾದರದ ಪರಿಸ್ಥಿತಿಯಲ್ಲಿದ್ದಾರೆ.

ದೇವರು ಅವರನ್ನ ಚೆನ್ನಾಗಿ ಇಟ್ಟಿರಲಿ. ಈ ರೀತಿ ಬ್ಯಾಕ್ ಡೋರ್ ಮೂಲಕ ಏನೇನು ಪಡೆಯಬೇಕೆಂದು ದುರಾಶೆ ಇಲ್ಲಾ, ದುರ್ಗತಿಯು ಇಲ್ಲಾ. ಇಂತಹ ಮಾತುಗಳ ಆಡುವುದಕ್ಕೆ ಮೊದಲು ಸ್ವಲ್ಪ ಯೋಚಿಸಿ ಎಚ್ಚರಿಕೆಯಿಂದ ಮಾತನಾಡಿ. ಪರ್ಸನಲ್ ಟಾರ್ಗೆಟ್ ಮಾಡ್ತಿರುವವರಿಗೆ ಸಂಸದೆ ಎಚ್ಚರಿಕೆ ನೀಡಿದ್ದಾರೆ.
