Malavalli : ಕಾಮುಕನ ಕೈಗೆ ಸಿಕ್ಕು ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದ ಬಾಲಕಿ ದಿವ್ಯಾ ಮನೆಗೆ ಸಂಸದೆ Sumalatha Ambreesh ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ರು.. ಘಟನೆ ನಡೆದು ವಾರವಾದ್ರೂ ಬಾರದ ಸಂಸದೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕತ್ವಾಗಿತ್ತು.. ಇಂದು ಬೆಳಗ್ಗೆ KR Pete ಕುಂಭ ಮೇಳದಲಿ CM Basavaraj Bommayi ಜೊತೆ ಕರ‍್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಸದೆ ವೆದಿಕೆ ಮೇಲೆ ಕಾಮುಕನಿಗೆ ತಕ್ಕ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿದ್ರು. ಜೊತೆಗೆ ಬಾಲಕಿ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ಹತ್ತು ಲಕ್ಷ ಹಣ ಮಂಜೂರು ಮಾಡಿಸಿ ಅಲ್ಲಿಯೇ ಆದೇಶ ಹೊರಡಿಸಿದ್ರು. ನಂತರ ಮಳವಳ್ಳಿಯ ಬಾಲಕಿ ಮನೆ ಭೇಟಿ ನೀಡಿ ಸಾಂತ್ವನ ಹೆಳಿದ್ರು. ಈ ವೇಳೆ ಕುಟುಂಬಸ್ಥರು ºನಮಗೆ ಹಣ ಬೇಡ ಕಾಮುಕನಿಗೆ ಕಠಿಣ ಶೀಕ್ಷೆ ಕೊಡಿಸಿ ಅಂತ ಒತ್ತಾಯ ಮಾಡಿದ್ರು. ಇದೇ ವೇಳೆ ಮಾತನಾಡಿದ ಸಂಸದೆ ಸುಮಲತಾ ಇವತ್ತು ಬಸ್ಸಿನಲ್ಲಿ ಟ್ರೈನಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ತಮ್ಮದೇ ಆದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ ಮಹಿಳೆಯರಿಗಾಗಿ ಇನ್ನೆಂತಹ ಸಮಾಜ ಬರಬೇಕಾಗಿದೆ ಎಂಬ ಪ್ರಶ್ನೆ ಎದುರಾಗಿದೆ ಎಂಬ ಆತಂಕ ವ್ಯಕ್ತಪಡಿಸಿದ್ರು.. ಸಂಸದೆ ಸುಮಲತಾ ಜೊತೆ Ex MLA Narendraswamy , ಬೇಲೂರು ಸೋಮಶೇಖರ್ ಹಲವರು ಪಾಲ್ಗೊಂಡಿದ್ದರು .
ಆ್ಯಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ…!
ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಮನೆಗೆ ಸಚಿವರ ಭೇಟಿ..
ಮಳವಳ್ಳಿಯಲ್ಲಿ ಅತ್ಯಾಚಾರಕ್ಕೀಡಾದ ಬಾಲಕಿ ದಿವ್ಯ ಕುಟುಂಬಕ್ಕೆ ಸಾಂತ್ವಾನ ಹೇಳಿದ ನಿಖಿಲ್ ಕುಮಾರಸ್ವಾಮಿ
ಮಳವಳ್ಳಿಯಲ್ಲಿ ಅತ್ಯಾಚಾರಕ್ಕೀಡಾದ ಬಾಲಕಿ ದಿವ್ಯ ಕುಟುಂಬಕ್ಕೆ ಸಾಂತ್ವಾನ ಹೇಳಿದ ನಿಖಿಲ್ ಕುಮಾರಸ್ವಾಮಿ