ರಾಧಾ ಕೃಷ್ಣ ಸಿರಿಯಲ್‌ನ ಕೃಷ್ಣ ಪಾತ್ರಧಾರಿ ಸುಮೇಧ್‌ ಮೂಗಿಗೆ ಪೆಟ್ಟು

Movie News: ರಾಧಾ ಕೃಷ್ಣ ಧಾರಾವಾಹಿಯಲ್ಲಿ ಕೃಷ್ಣ ಪಾತ್ರಧಾರಿಯಾಗಿದ್ದ ಸುಮೇಧ್ ಮೂಗಿಗೆ ಪೆಟ್ಟು ಬಿದ್ದಿದ್ದು, ಶಸ್ತ್ರಚಿಕಿತ್ಸೆಯಾಗಿದೆ. ಶೂಟಿಂಗ್ ವೇಳೆಯೇ ಈ ಅವಘಡ ಸಂಭವಿಸಿದ್ದು, ಆ್ಯಕ್ಷನ್ ದೃಶ್ಯ ಶೂಟ್ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಈ ಬಗ್ಗೆ ಸ್ವತಃ ಸುಮೇಧ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ನಾನೀಗ ಆರೋಗ್ಯವಾಗಿದ್ದೇನೆ. ಒಂದು ಸಣ್ಣ ಅಪಘಾತವಾಗಿದ್ದು, ಮೂಗಿಗೆ ಪೆಟ್ಟು ಬಿದ್ದಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸುಧಾರಿಸಿಕೊಳ್ಳಲು ಕೆಲವು ವಾರಗಳಾಗಬಹುದು ಎಂದು ಬರೆದುಕೊಂಡಿದ್ದಾರೆ.

ನೀವು ಕೊಟ್ಟ ಪ್ರೀತಿಯನ್ನು ಮರುಪಾವತಿಸಲು ನಾನು ಪ್ರಯತ್ನಿಸುತ್ತೇನೆ. ನಿಮಗೆ ಇಂಥ ಸುದ್ದಿಯಿಂದ ಬೇಸರವಾಗಬಹುದು, ಆಘಾತವಾಗಬಹುದು ಎಂಬ ಕಾರಣಕ್ಕಾಗಿ ನಾನೇ ಈ ವಿಷಯ ತಿಳಿಸಿದ್ದೇನೆ ಎಂದು ಸುಮೇಧ್ ಹೇಳಿದ್ದಾರೆ.

ಡಾನ್ಸ್ ಇಂಡಿಯಾ ಡಾನ್ಸ್ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಸುಮೇಧ್ ಈ ಮೊದಲು ಅಶೋಕ ಸಿರಿಯಲ್‌ನಲ್ಲಿ ವಿಲನ್‌ ಪಾತ್ರ ಮಾಡಿದ್ದರು. ಬಳಿಕ ರಾಧಾ ಕೃಷ್ಣ ಸಿರಿಯಲ್‌ನಲ್ಲಿನ ಕೃಷ್ಣ ಪಾತ್ರದಿಂದ ಅವರ ಜೀವನದ ದಿಕ್ಕೇ ಬದಲಾಯಿತು. ಇದೀಗ ಅವರು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಹಿಂದಿ, ಮರಾಠಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

About The Author