ಕರ್ನಾಟಕ ಟಿವಿ : ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರು, ಮೂವರು ಸಚಿವರು, ಹಾಲಿ ಸಿಎಂ, ಮಾಜಿ ಪ್ರಧಾನಿ, ಜೊತೆಗೆ ಜೆಡಿಎಸ್ ಭದ್ರಕೋಟೆ ಎಂಬ ಹಣೆ ಪಟ್ಟಿ.. ಹೀಗಿದ್ದರೂ ಸ್ವಾಭಿಮಾನದ ಹೆಸರಿನಲ್ಲಿ ಸುಮಲತಾ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ದಳಪತಿಗಳನ್ನ ಧೂಳಿಪಟ ಮಾಡಿದ್ರು. ಮಂಡ್ಯದಲ್ಲಿ ನಾವೇ, ನಮ್ಮನ್ನ ಬಿಟ್ರೆ ಉಳಿದವರೆಲ್ಲಾ ಜೀರೋ ಅಂತ ಬಿಲ್ಡಪ್ ಕೊಟ್ಟವರು ಫಲಿತಾಂಶ ಬಂದ ಕೂಡಲೇ ಮೂಲೆ ಸೇರಿದ್ರು. ಮಂಡ್ಯ ಜನ ಇಡೀ ದೇಶವೇ ನೋಡುವಂತ ಫಲಿತಾಂಶ ಕೊಟ್ಟಿದ್ರು. ಜೆಡಿಎಸ್ ವಿರುದ್ಧ ಸ್ಪರ್ಧೆ ಮಾಡಿದ ಸುಮಲತಾಗೆ ರಾಜ್ಯ ಕಾಂಗ್ರೆಸ್ ಸಪೋರ್ಟ್ ಮಾಡದಿದ್ದರೂ ಮಂಡ್ಯ ಜಿಲ್ಲೆಯ 99% ಕೈನಾಯಕರು ಬೆನ್ನೆಲುಬಾಗಿ ನಿಂದು ಚುನಾವಣೆ ಮಾಡಿದ್ರು. ಬರೀ ಮಂಡ್ಯ ಕಾಂಗ್ರೆಸ್ ನಾಯಕರನ್ನ ನೆಚ್ಚಿಕೊಂಡಿದ್ರೆ ಸಮಲುತಾ ಗೆಲುವು ಸಾಧ್ಯವಾಗ್ತಿರಲಿಲ್ಲ.. ಬಿಜೆಪಿ ಹಾಗೂ ರೈತ ಸಂಘದ ಕಾರ್ಯಕರ್ತರು, ನಾಯಕರ ಬೆಂಬಲದಿಂದ ಕುಮಾರಸ್ವಾಮಿ ಪುತ್ರನನ್ನ ಸೋಲಿಸಲು ಸಾಧ್ಯವಾಯ್ತು.. ಸ್ವಾಭಿಮಾನದ ಹೆಸರಿನಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ವಿರೋಧಿಗಳು ಒಂದಾದ ಕಾರಣ ಸುಮಲತಾ ಗೆಲುವು ಸುಲಭವಾಯ್ತು.. ಆದ್ರೀಗ ಸ್ವಾಭಿಮಾನದ ಹೆಸರಿನಲ್ಲಿ ಒಂದಾದವರೇ ತಲೆಗೊಂದು ಮಾತನಾಡಿ ಸುಮಲತಾ ಅಂಬರೀಷ್ ರನ್ನ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ..
ಬಿಜೆಪಿ ಕಚೇರಿಗೆ ಸುಮಲತಾ ಭೇಟಿ ನೀಡಿದ್ದಕ್ಕೆ ಕಾಂಗ್ರೆಸ್ ವಿರೊಧ
ಇನ್ನು ಮಂಡ್ಯದಲ್ಲಿ ಬಿಜೆಪಿ ಎಂಎಲ್ಎ, ಎಂಪಿ ಚುನಾವಣೆ ಗೆಲ್ಲದಿದ್ದರೂ ಸರಿಸುಮಾರು ಒಂದೂವರೆಯಿಂದ ಎರಡು ಲಕ್ಷ ಪಕ್ಷದ ಮತಗಳಿವೆ.. ಕಳೆದು ಚುನಾವಣೆಯಲ್ಲಿ ಮೋದಿ ಬಹಿರಂಗವಾಗಿಯೇ ಸಮಲತಾ ಬೆಂಬಲಿಸುವಂತೆ ಕರೆ ಕೊಟ್ಟಿದ್ರು. ಅಲ್ಲದೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಘೋಷಣೆ ಮಾಡಿ ಬೆಂಬಲ ಸೂಚಿಸಿದ್ರು.. ಈ ಹಿನ್ನೆಲೆ ಇಂದು ಮಂಡ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸುಮಲತಾ ಕಮಲ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಧನ್ಯವಾದ ತಿಳಿಸಿದ್ರು. ಇದೇ ವೇಳೆ ನಾನು ಬಿಜೆಪಿ ಸೇರುವುದಿಲ್ಲ, ಹಾಗೆಯೇ ಬಿಜೆಪಿಗೂ ನನ್ನ ಸೇರ್ಪಡೆ ಬೇಕಾಗಿಲ್ಲ. ಯಾಕಂದ್ರೆ ಬಿಜೆಪಿಗೆ ಸಾಕಷ್ಟು ಸಂಸದರಿದ್ದಾರೆ ಅಂತ ಸ್ಪಷ್ಟಪಡಿಸಿದ್ರು.. ಮಂಡ್ಯದಲ್ಲಿ ಚಲುವರಾಯಸ್ವಾಮಿ ಬಣದ ಕಾಂಗ್ರೆಸ್ ನಾಯಕರಿಗೆ ಸುಮಲತಾ ಬಿಜೆಪಿ ಕಚೇರಿಗೆ ತೆರಳಿದ್ದು ಯಾವುದೇ ಬೇಸರವಿಲ್ಲ.. ಆದ್ರೆ, ಡಿಕೆಶಿ ಬೆಂಬಲಿಗ ಡಾ. ರವೀಂದ್ರ ಸುಮಲತಾ ಬಿಜೆಪಿ ಕಚೇರಿ ಭೇಟಿಯನ್ನ ವಿರೋಧಿಸಿದ್ದಾರೆ. ಹಾಗಂತ ಮಂಡ್ಯದ ಕಾಂಗ್ರೆಸ್ ನಾಯಕರೆಲ್ಲಾ ವಿರೋಧ ಮಾಡಿಲ್ಲ. ಯಾಕಂದ್ರೆ ಮಂಡ್ಯದಲ್ಲಿ ಜೆಡಿಎಸ್ ಸೋಲಿಸಬೇಕಾದರೆ ಕಾಂಗ್ರೆಸ್ ಜೊತೆ ಬಿಜೆಪಿ ಮತಗಳೂ ಸೇರಿದ್ರೆ ಮಾತ್ರ ಸಾಧ್ಯ ಅನ್ನೋದು ಗೊತ್ತು. ಆದ್ರೆ, ಡಿಕೆ ಶಿವಕುಮಾರ್ ಓಲೈಕೆ ರಾಜಕಾರಣ ಮಾಡುವ ಕೆಲವರು ಸುಮಲತಾ ಬಿಜೆಪಿ ಕಚೇರಿ ಭೇಟಿ ವಿರೋಧ ಮಾಡ್ತಿದ್ದಾರೆ..
ಸುಮಲತಾ ಶೀಘ್ರವೇ ಬಿಜೆಪಿ ಅಥವಾ ಕಾಂಗ್ರೆಸ್ ಸೇರಿದ್ರೆ ಬಂಡಾಯ ಶಮನ..!
ಇನ್ನು ಜೆಡಿಎಸ್ ವಿರೋಧಿ ಮತಗಳನ್ನ ಪಡೆದು ಭಾರೀ ಅಂತರದಲ್ಲಿ ಗೆಲುವು ಸಾಧಿಸಿರುವ ಸುಮಲತಾ ಬೆಂಬಲಿಗರು ಹಾಗೂ ತನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಶೀಘ್ರವೇ ಯಾವುದಾದರೊಂದು ಪಕ್ಷವನ್ನ ಸೇರಬೇಕಿದೆ. ಇಲ್ಲವಾದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸುಮಲತಾ ಬೆಂಬಲಿಸಿರುವ ಕಾಂಗ್ರೆಸ್, ಬಿಜೆಪಿ, ರೈತಸಂಘದ ಕಾರ್ಯಕರ್ತರಲ್ಲಿ ಗೊಂದಲ ಶುರುವಾಗಲಿದೆ.. ಸುಮಲತಾ ರಾಜಕೀಯ ಭವಷ್ಯದ ದೃಷ್ಟಿಯಿಂದ ಯಾವುದಾರೊಂದು ಪಕ್ಷದ ಜೊತೆ ಗುರುತಿಸಿಕೊಳ್ಳುವುದು ಒಳ್ಳೆಯದು.
ಯಸ್ ವೀಕ್ಷಕರೇ ಸುಮಲತಾ ಅಂಬರೀಶ್ ಯಾವ ಪಕ್ಷ ಸೇರಿದರೆ ಒಳ್ಳೆಯದು..? ಕಾಂಗ್ರೆಸ್ ಅಥವಾ ಬಿಜೆಪಿ..? ಈ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ