Karkala News: ಕಾರ್ಕಳ : ಧಾರ್ಮಿಕ ವಿಚಾರವಾಗಿ ದೈವಸ್ಥಾನ, ದೇವಸ್ಥಾನಗಳ ಅಭಿವೃದ್ದಿಯ ಸಂದರ್ಭ ನಾವು ಮರಗಳನ್ನು ಕಡಿಯುತ್ತೇವೆ ಅದರ ಬದಲಿಗೆ ಅಷ್ಟೇ ಪ್ರಮಾಣದಲ್ಲಿ ಮರಗಳನ್ನು ಮತ್ತೆ ಬೆಳೆಸಿ ಪೋಷಿಸುವ ಜವಬ್ದಾರಿ ನಮ್ಮಲ್ಲಿರಬೇಕು. ಎಷ್ಟು ಮರಗಳ ಕಡಿಯುತ್ತೇವೆಯೋ ಬದಲಿಗೆ ಅಷ್ಟೇ ಪ್ರಮಾಣದಲ್ಲಿ ಮರಗಿಡ ಬೆಳೆಸುವ ಸಂಕಲ್ಪವನ್ನು ರೂಡಿಸಿಕೊಳ್ಳಬೇಕು ಎಂದು ಎಂದು ಮಾಜಿ ಸಚಿವ, ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಅರಣ್ಯ ಇಲಾಖೆ ಮಂಗಳೂರು ವೃತ್ತ, ಕಾರ್ಕಳ ಪ್ರಾದೇಶಿಕ ವಲಯ, ಕಾರ್ಕಳ ಪುರಸಭೆ ಹಾಗೂ ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ ಇದರ ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿ ಇದರ ಆಶ್ರಯದಲ್ಲಿ ರವಿವಾರ ಕಾರ್ಕಳ ರಾಮಸಮುದ್ರ ಬಳಿ ಆಯೋಜಿಸಲಾದ ವನಮಹೋತ್ಸವ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆಯನ್ನು ನೀಡಿ ಮಾತನಾಡಿದರು.
ಪರಿಸರದಲ್ಲಿನ ಏರು ಪೇರುಗಳಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುವುದನ್ನು ಕಂಡಿದ್ದೇವೆ. ಅರಣ್ಯ ಸಂಪತ್ತಿನ ಅತಿಯಾದ ಬಳಕೆ ಕೂಡ ಇದಕ್ಕೆ ಕಾರಣ. ನೀರಿನ ಬಳಕೆಯಲ್ಲೂ ಮಿತಿ ಇರಬೇಕು. ಪರಿಸರ ನಾಶ ಮಾಡದೆ ಸಂರಕ್ಷಿಸುವ ಕೆಲಸ ಸ್ವ ಇಚ್ಚೆಯಿಂದ ಆಗಬೇಕು ಎಂದರು.
ಈ ಸಂದರ್ಭ ತಹಶೀಲ್ದಾರ್ ಅನಂತ ಶಂಕರ್ ಬಿ, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ. ಎನ್, ಎಸಿಎಫ್ ಸತೀಶ್ ಎನ್, ಆರ್‍ಎಫ್‍ಓ ಜಿ.ಡಿ. ದಿನೇಶ್, ಕಾರ್ಕಳ ರೇಂಜರ್ ಪ್ರಭಾಕರ್ ಕುಲಾಲ್, ಉಪ ವಲಯಾರಣ್ಯಾಧಿಕಾರಿ ಪ್ರಕಾಶ್ಚಂದ್ರ, ಕಸಾಪದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Siddaramaiah : ಫಾಕ್ಸ್ ಕಾನ್ ಇಂಡಸ್ಟ್ರೀಯಲ್ ಇಂಟರ್ನೆಟ್ ಸಂಸ್ಥೆಯ ಸಿ.ಇ.ಒ ಜೊತೆ ಸಿಎಂ ಸಮಾಲೋಚನೆ
ಮಹದಾಯಿ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ: ವೀರೇಶ ಸೊರಬದಮಠ ಗಂಭೀರ ಆರೋಪ