Sunday, September 8, 2024

Latest Posts

ಸುಂಕದ ಕಟ್ಟೆ ಆಸಿಡ್ ದಾಳಿ ಪ್ರಕರಣ: ಸಂತ್ರಸ್ಥೆಯಿಂದ ಸರ್ಕಾರಕ್ಕೆ ಮನವಿ

- Advertisement -

ಬೆಂಗಳೂರು ಸುಂಕದಕಟ್ಟೆಯಲ್ಲಿ ಎಪ್ರಿಲ್​ 28ರಂದು ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಏಸಿಡ್ ದಾಳಿ ಪ್ರಕರಣವೊಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.ಮುತ್ತೂಟ್ ಫಿನ್​​ಕಾರ್ಪ್​ ಬಳಿ ಆರೋಪಿ ನಾಗೇಶ್ ಆ್ಯಸಿಡ್ ಹಾಕಿ ವಿಕೃತಿ ಮೆರೆದಿದ್ದ ಎನ್ನಲಾಗಿತ್ತು.ನಾಗೇಶ್ ಎಂಬಾತ ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದನು. ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದನು. ಗಾಯಾಳು ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಇದೀಗ ಯುವತಿ ಚೇತರಿಸಿಕೊಂಡಿದ್ದಾಳೆ.

ಚೇತರಿಸಿಕೊಂಡಿರುವ ಆಸಿಡ್ ದಾಳಿ ಸಂತ್ರಸ್ತೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾಳೆ. ನಾನು ಬಹುತೇಕ ಗುಣಮುಖವಾಗಿದ್ದು, ತುಂಬಾ ನೋವು ಪಟ್ಟಿದ್ದೇನೆ, ಸರ್ಕಾರಕ್ಕೆ ಒಂದು ಮನವಿ ಮಾಡುತ್ತೇನೆ. ಎಲ್ಲೂ ಆ್ಯಸಿಡ್ ಸಿಗಬಾರದು,ಯಾರಿಗೂ ಈ ಸ್ಥಿತಿ ಬೇಡ. ನನಗಾದ ನೋವು ಯಾವ ಹೆಣ್ಣಿಗೂ ಬೇಡ ಎಂದು ಅಳಲನ್ನು ತೋಡಿಕೊಂಡಿದ್ದಾಳೆ.

“ನಾನು ಕಾನೂನು ಮೂಲಕ ಆರೋಪಿಗೆ ಕಠಿಣ ಶಿಕ್ಷೆ ಕೊಡುವಂತೆ ಮನವಿ ಮಾಡುತ್ತೇನೆ. ಆ್ಯಸಿಡ್ ದಾಳಿ ನಡೆದ ದಿನ ನಾನು ಆಫೀಸ್ ಗೆ ಹೋಗಿದ್ದೆ. ಅಪ್ಪ ನನ್ನನ್ನು ಡ್ರಾಪ್ ಮಾಡಿದರು. ಅಮೇಲೆ ನಾನು ಮೇಲೆ ಹೋಗಿದ್ದೆ. ಯಾರೊ ಹಿಂದಿನಿಂದ ಕರೆದಂತೆ ಆಯ್ತು. ಆವಾಗ ನೋಡಿದರೆ ಈ ನಾಗೇಶ್​ ಕೈನಲ್ಲಿ ಗ್ಲೌಸ್​ನಲ್ಲಿ ಆ್ಯಸಿಡ್ ಹಿಡಿದು ನಿಂತಿದ್ದನು. ನಂತರ ನಾನು ಮುಂದೆ ಬಂದೆ ತನ್ನ ಜುಟ್ಟು ಹಿಡಿದು ಎಳೆದು ಆ್ಯಸಿಡ್ ಹಾಕಿದ.ಉರಿ ತಾಳಲಾರದೆನಾನು ಕಿರುಚಾಡಿದೆ” ಎಂಬುವುದಾಗಿ  ದಾಳಿಯ ದಿನದ ಘಟನೆ ಬಗ್ಗೆ  ವಿವರಿಸಿದರು.

ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಆರೋಪಿ ನಾಗೇಶ್​ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಆಸಿಡ್ ಎರಚಿ  ಪರಾರಿಯಾಗಿದ್ದ ಆರೋಪಿ ನಾಗೇಶ್​ನನ್ನು ಮೇ 13 ರಂದು 16 ದಿನಗಳ ಬಳಿಕ ಬಂಧಿಸಿದ್ದಾರೆ.

- Advertisement -

Latest Posts

Don't Miss