ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಇಂದು 72ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಬರ್ತಡೇಗೆ ಎಲ್ಲರೂ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ರಜನಿಕಾಂತ್ ಅವರ ಫ್ಯಾನ್ಸ್ ಅದ್ದೂರಿಯಾಗಿ ಹುಟ್ಟುಹ್ಬಬವನ್ನು ಆಚರಿಸುತ್ತಿದ್ದಾರೆ. ತಲೈವಾ ಜನ್ಮದಿನದಂದೇ ‘ಬಾಬಾ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ಚಿತ್ರವನ್ನು ಥೀಯಟರ್ ನಲ್ಲಿ ನೋಡಲು ಅಭಿಮಾನಗಳು ಕಾತುರರಾಗಿದ್ದಾರೆ. ರಜನಿಕಾಂತ್ ಅವರ ಆಪ್ತರು, ಸೆಲೆಬ್ರೆಟಿಗಳು ಕೂಡ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸುತ್ತಾ, ಅವರ ಮುಂದಿನ ಸಿನಿಮಾಗಳಿಗೆ ಶುಭ ಹಾರೈಸಿದ್ದಾರೆ.
ಶತಕೋಟಿ ಮೌಲ್ಯದ 500 ವಿಮಾನಗಳ ಖರೀದಿಗೆ ಸಜ್ಜಾದ ಏರ್ ಇಂಡಿಯಾ
ಚಿತ್ರರಂಗದಲ್ಲಿ ತಮ್ಮದೆ ವಿಭಿನ್ನ ಶೈಲಿಯಲ್ಲಿಅಭಿನಯಿಸಿ 5 ದಶಕಗಳಿಂದಲೂ ಜನರನ್ನು ಮನರಂಜಿಸುತ್ತಿದ್ದಾರೆ. ರಜನಿಕಾಂತ್ ಅವರಿಗೆ ವಯಸ್ಸಾಗುತ್ತಿದ್ದರೂ ಅವರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಅವರ ಕೈಯಲ್ಲಿ ಸದ್ಯ ಜೈಲರ್, ಲಾಲ್ ಸಲಾಂ, ಮುಂತಾದ ಸಿನಿಮಾಗಳಿವೆ. ‘ಬಾಬಾ’ ಮರು ಬಿಡುಗಡೆ ಮಾಡಲಾಗಿದ್ದು, ಹೊಸ ತಂತ್ರಜ್ಞಾನ ಬಳಸಿ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಚಿತ್ರದಲ್ಲಿ ರಜನಿಕಾಂತ್ ಅವರಿಗೆ 2 ಶೇಡ್ ನ ಪಾತ್ರವಿದ್ದು, ಇದ್ಕಕೆ ತಲೈವಾ ಹೊಸದಾಗಿ ಡಬ್ಬಿಂಗ್ ಸಹ ಮಾಡಿದ್ದಾರೆ.