- Advertisement -
www.karnatakatv.net :ಹೈದರಾಬಾದ್ :ಡ್ರೋನ್ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟ ಬೆನ್ನಲ್ಲೇ, ತೆಲಗಾಂಣದ ವಿಕಾರಾಬಾದ್ ಜಿಲ್ಲೆಯಲ್ಲಿ ಡ್ರೋನ್ ಮೂಲಕ ಔಷಧಿಗಳನ್ನು ಸ್ಥಳಾಂತರಿಸಲಾಗಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಆರಂಭಿಸಲಾದ ‘ಮೆಡಿಸಿನ್ ಫ್ರಂ ದಿ ಸ್ಕೈ’ ಯೋಜನೆಯಡಿ 12 ಕೆ.ಜಿ. ಔಷಧ ಮತ್ತು 20 ಡೋಸ್ ಲಸಿಕೆಯನ್ನು ಹೊತ್ತು ಡ್ರೋನ್ 6 ಕಿ.ಮಿ ದೂರದ ಪ್ರದೇಶಕ್ಕೆ ಯಶಸ್ವಿಯಾಗಿ ತಲುಪಿಸಿದೆ. ಇಷ್ಟೋಂದು ದೂರದ ವರೆಗೆ ಔಷಧಿ ಮತ್ತು ಲಸಿಕೆಯನ್ನ ಪೂರೈಸಿದ ದೇಶದ ಮೊದಲ ಉದಾಹಣೆಗೆ ಪಾತ್ರವಾಗಿದೆ. ಆದ್ದರಿಂದ ಈ ಯಶಸ್ಸು ದೇಶದಲ್ಲೇ ಕ್ರಾಂತಿಕಾರಿ ಹೆಜ್ಜೆ, ಈ ಯೋಜನೆಯನ್ನು ಅತಿ ಶೀಘ್ರವೇ 8 ರಾಜ್ಯಗಳಿಗೆ ನೀಡಿ, 2030 ರೊಳಗೆ ಭಾರತ ಡ್ರೋನ್ ಹಬ್ ಆಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
- Advertisement -