Saturday, July 20, 2024

Latest Posts

ಭತ್ತ ಸೇರಿದಂತೆ 14 ಬೆಳೆಗಳಿಗೆ ಬೆಂಬಲ; ಬೆಲೆ ಹೆಚ್ಚಳ!

- Advertisement -

ಭತ್ತ, ರಾಗಿ, ಜೋಳ ಹಾಗೂ ದ್ವಿದಳ ಧಾನ್ಯಗಳು ಸೇರಿದಂತೆ 14 ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ 2022- 23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಬೇಸಾಯದ ಪ್ರದೇಶವನ್ನು ಹೆಚ್ಚಿಸಲು ಹಾಗೂ ವಿವಿಧ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಸಭೆ ಬಳಿಕ ಮಾಹಿತಿಯನ್ನು ನೀಡಿದ್ದಾರೆ.

ಬಿತ್ತನೆ ಆರಂಭಕ್ಕೂ ಮುನ್ನವೇ ಯಾವ ಯಾವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎಂಬ ಬಗ್ಗೆ ರೈತರಿಗೆ ಮಾಹಿತಿ ಸಿಗುವುದು. ಹಾಗಾಗಿ ರೈತರಿಗೆ ಇದರಿಂದ ನೆರವಾಗಲಿದೆ ಎಂದು ತಿಳಿಸಿದರು.
ಭತ್ತ ಸೇರಿದಂತೆ 14 ಬೆಳೆಗಳಿಗೆ ನೀಡುವ ಎಂ.ಎಸ್.ಪಿ ಯಲ್ಲಿ ಪ್ರತಿ ಕ್ವಿಂಟಾಲ್ ಗೆ 92 ರಿಂದ 523 ರೂ ಹೆಚ್ವಳ ಮಾಡಲಾಗಿದೆ. ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ 92 ರೂ ಹೆಚ್ಚಳ ಮಾಡಲಾಗಿದ್ದು, ಎಳ್ಳಿಗೆ 523 ರೂ ಗರಿಷ್ಠ ಹೆಚ್ಚಳ ಮಾಡಲಾಗಿದೆ.

ಭತ್ತಕ್ಕೆ ನೀಡುವ ಎಂ.ಎಸ್.ಪಿ ಯನ್ನು 100 ರೂ ಗೆ ಹೆಚ್ಚಿಸಲಾಗಿದ್ದು, ಕ್ವಿಂಟಲ್ ದರ 2040 ರೂ ಆಗಲಿದೆ.
2014-15ನೇ ಸಾಲಿನ ಎಂ.ಎಸ್.ಪಿ ಗೆ ಹೋಲಿಸಿದಾಗ, 2022-23ನೇ ಸಾಲಿನಲ್ಲಿ 14 ಬೆಳೆಗಳಿಗೆ ಘೋಷಿಸಿರುವ ಎಂ.ಎಸ್.ಪಿ ಶೇಕಡಾ 46 ರಿಂದ 131ರಷ್ಟು ಹೆಚ್ಚಳವಾಗಿದೆ.

 

- Advertisement -

Latest Posts

Don't Miss