Corona ನಡುವೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮೇಕೆದಾಟು ಹೋರಾಟವನ್ನು ಮಾಡೇ ಮಾಡ್ತೇವೆ ಎಂದಿದ್ದಾರೆ. ಈ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲವನ್ನು ಸೂಚಿಸಿದೆ.
ಈ ಸಂಭoದ ಹಿರಿಯ ನಟಿ ಉಮಾಶ್ರೀ, ಜಯಮಾಲ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು,ಜಯಮಾಲ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಎಲ್ಲರೂ ಸುದ್ದಿಗೋಷ್ಟಿಯನ್ನು ನಡೆಸಿದರು. ಕೊರೊನಾ ಹಿನ್ನಲೆ ಸರ್ಕಾರ ಜಾರಿ ಮಾಡಿರುವ ರೂಲ್ಸ್ ಫಾಲೋ ಮಾಡ್ತೇವೆ ಹಾಗೇ ಕರ್ಫ್ಯೂ ಇಲ್ಲದಿರುವ ದಿನ ಮೇಕೆದಾಟು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಕೊಡ್ತೇವೆ , ಜೊತೆಗೆ ಎಲ್ಲಾ ಕಲಾವಿದರಿಗೂ ತಿಳಿಸುತ್ತೇವೆ. ಎಲ್ಲರನ್ನು ಹೋರಾಟದಲ್ಲಿ ಭಾಗವಹಿಸಲು ತಿಳಿಸುತ್ತೇವೆ , ಎಂದರು ಈ ಹಿಂದೆ ಮಹದಾಯಿ, ಕಾವೇರಿ ಹೋರಾಟಕ್ಕೆ ಬೆಂಬಲ ಕೊಟ್ಟಿದ್ವಿ. ನಾಡು ನುಡಿ ಜಲದ ವಿಚಾರ ಬಂದ್ರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಾವಾಗಲೂ ಬೆಂಬಲ ನೀಡುತ್ತೆ ಎಂದರು.
ಇದೊಂದು ವಿಶಿಷ್ಟವಾದ ಹೋರಾಟ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ಡಾ ರಾಜ್ ಕುಮಾರ್ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ ನಾವು ನಮ್ಮ ನೀರಿಗಾಗಿ ಹೋರಾಟ ಮಾಡಲೇಬೇಕೆಂದು ಕರೆ ನೀಡಿದರು.
karnataka ಚಲನಚಿತ್ರ ಮಂಡಳಿಯಿoದ ಮೇಕೆದಾಟು ಹೋರಾಟಕ್ಕೆ ಬೆಂಬಲ
- Advertisement -
- Advertisement -