ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಕುರಿತಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿ ಆದೇಶಿಸಿದ್ದು, ದೋಸ್ತಿಗಳಿಗೆ ಮಂಗಳವಾರದ ವರೆಗೂ ರಿಲೀಫ್ ಸಿಕ್ಕಂತಾಗಿದೆ.
ನಮ್ಮ ರಾಜೀನಾಮೆ ಅಂಗೀಕಾರ ಮಾಡಲು ವಿಧನಾಸಭಾ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ವಿಳಂಬ ನೀತಿ ಅನುಸರಿಸುತ್ತಿದ್ದು, ರಾಜೀನಾಮೆ ಇತ್ಯಾರ್ಥ ಕೂಡಲೇ ಮಾಡಬೇಕೆಂದು ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಸ್ಪೀಕರ್ ಹಾಗೂ ಅತೃಪ್ತ ಶಾಸಕರ ಪರ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಈ ಅರ್ಜಿ ಕುರಿತ ವಿಸ್ತೃತ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಯಥಾಸ್ಥಿತಿ ಮುಂದುವರಿಕೆಗೆ ಆದೇಶ ನೀಡಿರೋ ಸರ್ವೋಚ್ಚ ನ್ಯಾಯಾಲಯ, ಸ್ಪೀಕರ್ ಗೂ ಕೂಡ ಕೆಲ ನಿಬಂಧನೆಗಳನ್ನು ಹಾಕಿದೆ. ಕೆಲ ಮಹತ್ವದ ಸಾಂವಿಧಾನಿಕ ವಿಚಾರಗಳನ್ನು ಮೊದಲು ಇತ್ಯಾರ್ಥ ಮಾಡಬೇಕಿರೋದ್ರಿಂದ ಸ್ಪೀಕರ್ ಶಾಸಕರ ರಾಜೀನಾಮೆ ಅಂಗೀಕಾರವಾಗಲೀ ಅಥವಾ ಅನರ್ಹತೆಗೊಳಿಸುವಂತಿಲ್ಲ ಅಂತ ಆದೇಶ ನೀಡಿದೆ. ಇದರಿಂದಾಗಿ ಇಂದು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಲಿದೆಯಾ ಅಂತ ಆತಂಕಕ್ಕೊಳಗಾಗಿದ್ದ ದೋಸ್ತಿ ನಾಯಕರಿಗೆ ಮಂಗಳವಾರದವರೆಗೂ ರಿಲೀಫ್ ಸಿಕ್ಕಿದೆ.
ಇನ್ನು ಸುಪ್ರೀಂ ಕೋರ್ಟ್ ಶಾಸಕರ ರಾಜೀನಾಮೆ ಕುರಿತು ಸ್ಪಷ್ಟ ನಿಲುವು ತಾಳಲು ಆದೇಶ ನೀಡಲಿದೆ ಅಂತ ಅತ್ಯಂತ ವಿಶ್ವಾಸದಿಂದಿದ್ದ ಕಮಲ ಪಡೆಗೆ ಮತ್ತೆ ನಿರಾಶೆಯಾಗಿದೆ.
ಸೂತ್ರಧಾರ ಸಿದ್ದು..! ಮಿಸ್ ಮಾಡದೇ ಈ ವಿಡಿಯೋ ನೋಡಿ