Tuesday, January 14, 2025

Latest Posts

ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಸೂಚನೆ 

- Advertisement -

ಹೊಸದಿಲ್ಲಿ: ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್‍ನ (ಐಒಎ) ಚಟುವಟಿಕೆಗಳನ್ನು ಆಡಳಿತಗಾರರ ಸಮಿತಿ (ಸಿಒಎ) ಪರಿಶೀಲಿಸುವುದು ಬೇಡ ಯಥಾಸ್ಥಿತಿ ಕಾಪಾಡುವಂತೆ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಕೇಂದ್ರ ಹಾಗೂ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಮುಖ್ಯ ನ್ಯಾಯಾ ಮೂರ್ತಿ ಎನ್.ವಿ.ರಮಣ ಈ ಹಿಂದಿನಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದರು.

ಚುನಾಯಿತರಲ್ಲದ ಆಡಳಿತಗಾರರ ಸಮಿತಿಯನ್ನು ಅಂತಾರಾಷ್ಟ್ರೀಯ ಕ್ರೀಡಾ ಮಂಡಳಿ  ಮಾನ್ಯತೆ ನೀಡುವುದಿಲ್ಲ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ ಭಾರತವನ್ನು ಅಮಾನತು ಮಾಡಬಹುದೆಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಯಿತು.

ಈ ಹಿಂದೆ ದೆಹಲಿ ಹೈಕೋರ್ಟ್ ಸುಪ್ರೀಮ್ ನ್ಯಾಯಾೀಶ ಅನಿಲ್ ಆರ್ ದೇವ್, ಮಾಜಿ ಚುನಾವಣಾ ಆಯೋಗದ ಕಮೀಶನರ್ ಖುರೇಶಿ ಮತ್ತು ಮಾಜಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಅವರನ್ನು ಆಡಳಿತಗಾರರ ಸಮಿತಿಯನ್ನು ರಚಿಸಿತ್ತು.

- Advertisement -

Latest Posts

Don't Miss