Wednesday, September 11, 2024

Latest Posts

Political News: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಅರೆಸ್ಟ್‌..

- Advertisement -

Political News: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಂಬಂಧಿಸಿದಂತೆ, ಸೂರಜ್ ರೇವಣ್ಣ ಅವರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ಸೂರಜ್ ಆಪ್ತ ಶಿವಕುಮಾರ್ ಸಂತ್ರಸ್ತನ ವಿರುದ್ಧ ದೂರು ದಾಖಲಿಸಿದ್ದರು. ಇದಕ್ಕಾಗಿ ಆಡಿಯೋ, ವೀಡಿಯೋ, ಫೋನ್ ಕಾಲ್ ಸಾಕ್ಷಿಗಳನ್ನು ನೀಡಲು ಸೂರಜ್ ರೇವಣ್ಣ ಠಾಣೆಗೆ ಬಂದಿದ್ದರು. ಈ ವೇಳೆ ಸೂರಜ್‌ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ, ಇಂದು ಸೂರಜ್‌ನನ್ನು ಅರೆಸ್ಟ್ ಮಾಡಲಾಗಿದೆ.

ಲೈಂಗಿಕ ದೌರ್ಜನ್ಯ ಮಾಡಿರೋದಾಗಿ ಸುಳ್ಳು ಹೇಳೋದಾಗಿ ಬೆದರಿಸಿ ಐದು ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆಂದು ಆರೋಪಿಸಿ,ಡಾ. ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದರು.

ಶಿವಕುಮಾರ್ ಬಳಿ ಅರಕೂಲುಗೂಡು ಮೂಲದ ಈ ಯುವಕ ಬಂದು, ನನಗೆ ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಕೇಳಿದ್ದ. ಹಾಗಾಗಿ ನಾನೇ ಸೂರಜ್ ರೇವಣ್ಣ ಅವರ ನಂಬರ್ ಕೊಟ್ಟು, ನೀನೇ ಕೆಲಸ ಕೇಳು ಎಂದಿದ್ದೆ. ಹಾಗಾಗಿ ಸಂತ್ರಸ್ತ ಎಂದು ಹೇಳಿರುವ ಯುವಕ, ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಕೆಲಸ ಕೇಳಲು ಹೋಗಿದ್ದ. ಕೆಲಸ ಕೇಳಿ ವಾಪಸ್ಸು ಬಂದ ಬಳಿಕ ಬ್ಲಾಕ್ ಮೇಲ್ ಮಾಡಿರೋದಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲ. ನನಗೆ ತುಂಬಾ ಕಷ್ಟ ಇದೆ, ನನಗೆ ಹಣ ಬೇಕು. ನೀನು ನಿಮ್ಮ ಬಾಸ್ ನಿಂದ ಐದು ಕೋಟಿ ಹಣ ಕೊಡಿಸದಿದ್ದರೆ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ಕೊಡ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವಿಚಾರವನ್ನು ನಾನು ನಮ್ಮ ಬಾಸ್ ಗೆ ತಿಳಿಸಿದೆ. ಆತ ಕೆಲಸ ಕೇಳಿಕೊಂಡು ಮನೆಗೆ ಬಂದಾಗ ಭದ್ರತೆಗಾಗಿ ಇದ್ದ ಪೊಲೀಸ್ ಸೇರಿ ಹಲವಾರು ಜನರು ಇದ್ದರು. ನಾನೇನು ತಪ್ಪು ಮಾಡಿಲ್ಲ, ಯಾಕೆ ಹಣ ಕೊಡಬೇಕು ಎಂದು ಬಾಸ್ ಹೇಳಿದ್ರು . ನಂತರ ಜೂನ್ 18 ರಂದು ಹಾಸನದ ಜಿಲ್ಲಾಸ್ಪತ್ರೆಗೆ ಬಂದು ಆಸ್ಪತ್ರೆ ಚೀಟಿಗೆ ಎಂಎಲ್ ಸಿ ಸೀಲ್ ಹಾಕಿಸಿ ಫೋಟೊ ಹಾಕಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ,  ಮೆಡಿಕೊ ಲೀಗಲ್ ಕೇಸ್ ಸೀಲ್ ಇರೊ ಆಸ್ಪತ್ರೆ ಚೀಟಿ ತೋರಿಸಿ ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ.  ಐದು ಕೋಟಿ ಬಳಿಕ ಮೂರು ಕೋಟಿ ,ಅಥವಾ ಕಡೆಗೆ ಎರಡುವರೆ ಕೋಟಿಯಾದ್ರು ಹಣ ಕೊಡಿಸು ಎಂದು ಡಿಮ್ಯಾಂಡ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಾಗಿದೆ.

ಹಣ ಕೊಡಿಸದಿದ್ದರೆ ದೊಡ್ಡ ಕುಟುಂಬವಾದ ಅವರ ಮರ್ಯಾದೆ ಕಳೆಯುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ. ನಿಮ್ಮ ಬಾಸ್ ಹಣ ಕೊಡದಿದ್ದರೆ ದೊಡ್ಡ ದೊಡ್ಡೋರು ಹಣ ಕೊಡಲು ರೆಡಿ ಇದ್ದಾರೆ. ನಾನು ಬೆಂಗಳೂರಿಗೆ ಹೋಗಿ ಮಾಧ್ಯಮದ ಮುಂದೆ ಹೋಗ್ತೇನೆ. ಸೂರಜ್ ರೇವಣ್ಣ ಗೌರವ ಹಾಳು ಮಾಡೋದಾಗಿ ಬೆದರಿಕೆ ಹಾಕಿದ್ದ ಎಂದು ಶಿವಕುಮಾರ್ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ, ಹೊಳೆನರಸಿಪುರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಇನ್ನೊಂದೆಡೆ ಸಂತ್ರಸ್‌ತ ಕೂಡ ಹಾಸನ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದ. ಈ ಕಾರಣಕ್ಕೆ ಸೂರಜ್ ರೇವಣ್ಣರನ್ನು ವಿಚಾರಣೆಗೆ ಒಳಪಡಿಸಿ, ಅರೆಸ್ಟ್ ಮಾಡಲಾಗಿದೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಲ ಸಾಕ್ಷ್ಯಗಳು ಕೂಡ ಸಿಕ್ಕಿದೆ.

Political News: ಹಾಸನ ಪೊಲೀಸ್ ಠಾಣೆಗೆ ಬಂದ ಸೂರಜ್ ರೇವಣ್ಣ

ಬಾಲಿವುಡ್ ಸಿಂಗರ್ ಭೂಮಿ ಕಬಳಿಸಿದ ಆರೋಪ: ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು

Bollywood News: ಮದುವೆ ಬಳಿಕ ಮತಾಂತರವಾಗುತ್ತಾರಾ ನಟಿ ಸೋನಾಕ್ಷಿ..?

- Advertisement -

Latest Posts

Don't Miss