www.karnatakatv.net : ವಿಶ್ವದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಹಂದಿಯ ಕಿಡ್ನಿಯನ್ನು ಮನುಷ್ಯನಿಗೆ ಕಸಿ ಮಾಡುವ ಮೂಲಕ ಅಮೆರಿಕ ವೈದ್ಯರು ಹೊಸ ದಾಖಲೆ ಬರೆದಿದ್ದಾರೆ. ಹೌದು, ನ್ಯೂಯಾರ್ಕ್ ನ ಲಂಗೋನ್ ಹೆಲ್ತ್ ಸಂಸ್ಥೆಯ ವೈದ್ಯರು ವೈದ್ಯಲೋಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.
ಪ್ರತಿದಿನ ಸಾವಿರಾರು ರೋಗಿಗಳು ಅಂಗಾoಗ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ದೇಹದಲ್ಲಿನ ನ್ಯೂನ್ಯತೆಗಳು ಮತ್ತು ಮಧ್ಯಪಾನ, ಧೂಮಪಾನದಂದಹ ದುಷ್ಟಟಗಳಿಂದಾಗಿ ದೇಹದ ಅಂಗಾoಗಳು ಹೀಗೆ ಕಾರ್ಯನಿರ್ವಹಿಸದೆ ವೈಫಲ್ಯವಾಗುತ್ತವೆ. ಇನ್ನು ಕಣ್ಣು, ಚರ್ಮ, ಕಿಡ್ನಿ, ಹೃದಯ, ಲಿವರ್, ಕರುಳು ಹೀಗೆ ಇನ್ನಿತರೆ ಯಾವುದೇ ಅಂಗಾoಗ ಕಾರ್ಯನಿರ್ವಹಿಸದೆ ಇದ್ದರೂ ಪ್ರಾಣಕ್ಕೆ ಕುತ್ತು ಎದುರಾಗಬಹುದು. ಕೆಲವೊಮ್ಮೆ ಆಪರೇಷನ್ ಮೂಲಕ ಅಂಗಾoಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸಬಹುದು. ಆದ್ರೆ ಕೆಲವೊಮ್ಮೆ, ವಿಪರೀತ ಸಮಸ್ಯೆ ಇದ್ದರೆ ಇಡೀ ಅಂಗವನ್ನೇ ಕಸಿ ಮಾಡಬೇಕಾಗೋ ಅನಿವಾರ್ಯತೆ ಎದುರಾಗುತ್ತೆ.
ಆದ್ರೆ ಇದಕ್ಕೆ ಮತ್ತೊಬ್ಬ ವ್ಯಕ್ತಿಯ ಅಂಗವನ್ನೇ ಮರುಜೋಡಣೆ ಮಾಡಬೇಕು. ಇತ್ತೀಚೆಗೆ ಅಂಗಾoಗ ಕಸಿ ಅತ್ಯಂತ ಚಾಲ್ತಿಯಲ್ಲಿರೋ ಚಿಕಿತ್ಸಾ ವಿಧಾನ. ಆದ್ರೆ ಇದೀಗ ಪ್ರಾಣಿಯ ಅಂಗಾoಗವನ್ನು ಮನುಷ್ಯನಿಗೆ ಜೋಡಣೆ ಮಾಡಿ ವೈದ್ಯಲೋಕದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.
ಹೌದು, ಅಮೆರಿಕಾದ ವೈದ್ಯರು ಸದ್ಯ ಹಂದಿಯೊoದರ ಕಿಡ್ನಿಯನ್ನು ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರಿಗೆ ಅವಳಡಿಸಿದ್ರು. ಆದ್ರೆ ಈಗಾಗಲೇ ಕೆಲ ಬಾರಿ ಈ ಹಂದಿ ಕಿಡ್ನಿಯನ್ನ ಮನುಷ್ಯನಿಗೆ ಅಳವಡಿಸೋ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ರೆ. ಈ ಸಂಶೋಧನೆಯಲ್ಲಿ ವೈದ್ಯರಿಗೆ ಮಹತ್ವದ ವಿಚಾರವೊಂದು ತಿಳಿದುಬಂದಿತ್ತು. ಅದೇನಪ್ಪಾ ಅಂದ್ರೆ, ಹಂದಿಯ ಅಂಗಾoಗಗಳಲ್ಲಿ ಹೆಚ್ಚು ಸಕ್ಕರೆ ಅಂಶವಿರುತ್ತೆ. ಹೀಗಾಗಿ ನಾವು ಏನೇ ಪ್ರಯತ್ನ ಮಾಡಿದ್ರೂ ಅದು ಮಾನವನ ದೇಹಕ್ಕೆ ಒಗ್ಗಿಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ ಅಂತ ತಿಳಿದುಬಂದಿತ್ತು. ಹೀಗಾಗಿ ಈ ಬಾರಿ ವೈದ್ಯರು ಹಂದಿಯ ಕಿಡ್ನಿಯಲ್ಲಿ ಸಕ್ಕರೆ ಅಂಶ ಕಡಿಮೆಯಾಗುವಂತೆ ವಂಶವಾಹಿಗಳನ್ನು ರಚಿಸಲಾಗಿತ್ತು. ನಂತರ ಅದನ್ನು ಸುರಕ್ಷಿತವಾಗಿ ಹಂದಿಯ ದೇಹದಿಂದ ತೆಗೆದು ಮಾನವನ ದೇಹಕ್ಕೆ ಅಳವಡಿಸಲಾಯ್ತು.
ಇನ್ನು ವೆಂಟಿಲೇಟರ್ ಸಹಾಯದಿಂದ ಉಸಿರಾಡ್ತಿದ್ದ ಆಕೆಗೆ ಹಂದಿಯ ಮೂತ್ರಪಿಂಡ ಅಳವಡಿಸಿದ ಮೇಲೆ ಆಕೆಯ ದೇಹದಲ್ಲಿ ಕಂಡಬoದ ಬದಲಾವಣೆಗಳ ಮೇಲೆ ನಿಗಾ ಇಡಲಾಯ್ತು. ಹಂದಿಯ ಕಿಡ್ನಿ ಜೋಡಣೆ ಮಾಡಿದ್ದರಿಂದ ಆ ರೋಗಿಯ ದೇಹದಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬoದಿಲ್ಲವಾದ್ದರಿoದ ಈ ಪ್ರಯೋಗ ಯಶಸ್ವಿಯಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಇನ್ನು ಈ ಪ್ರಯೋಗ ನಡೆದ ಬಳಿಕ ಆಕೆಯ ಲೈಫ್ ಸಪೋರ್ಟ್ ತೆಗೆದುಹಾಕಲಾಗಿದೆ. ಹೀಗೆ ಪ್ರಾಣಿಗಳ ಅಂಗಾoಗವನ್ನೂ ಮನುಷ್ಯನ ದೇಹಕ್ಕೆ ಕಸಿ ಮಾಡೋ ಮೂಲಕ ನ್ಯೂಯಾರ್ಕ್ ನ ಲಂಗೋನ್ ಹೆಲ್ತ್ ಸಂಸ್ಥೆಯ ವಿಜ್ಞಾನಿಗಳು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಇನ್ನು ವಿಶ್ವಾದ್ಯಂತ ಲಕ್ಷಾಂತರ ಮಂದಿ ಕಿಡ್ನಿ ಕಸಿಗಾಗಿ ತಮಗೆ ಸೂಟ್ ಆಗೋ ಕಿಡ್ನಿಗಳಿಗಾಗಿ ಕಾಯ್ತಿದ್ದಾರೆ. ಅಂಗಾoಗಳ ಕೊರತೆಯಿಂದಾಗಿ ವಿಶ್ವಾದ್ಯಂತ ಅಂಗಾoಗ ದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದರ ಹೊರತಾಗಿಯೂ ಮಾನವನ ಅಂಗಾoಗಗಳು ದೊರೆಯೋದು ಕಷ್ಟ ಸಾಧ್ಯವಾಗ್ತಿದೆ. ಸದ್ಯ ಅಮೆರಿಕಾ ವೈದ್ಯರು ನಡೆಸಿರೋ ಈ ಸಂಶೋಧನೆ ಕ್ಲಿಕ್ ಆದ ಪಕ್ಷದಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರೋ ಲಕ್ಷಾಂತರ ಮಂದಿಯ ಪಾಲಿನ ಸಂಜೀವಿನಿಯಾಗೋದ್ರಲ್ಲಿ ಸಂಶಯವೇ ಇಲ್ಲ.
ಬ್ಯೂರೋ ರಿಪೋರ್ಟ್, ಕರ್ನಾಟಕ ಟಿವಿ