Thursday, October 16, 2025

Latest Posts

ಮುಂದಿನ ಚುನಾವಣೆಗಳಿಗೆ ಸುರ್ಜೇವಾಲಾ ಬಿಗ್ ಪ್ಲಾನ್!

- Advertisement -

ರಾಜ್ಯದಲ್ಲಿ ಮುಂದಿನ ಆರು ತಿಂಗಳೊಳಗೆ ಬಿಬಿಎಂಪಿ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಚುನಾವಣೆ ತಯಾರಿ ಕೈಗೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುನ್ಸಿಪಲ್ ಮತ್ತು ಗ್ರಾಮೀಣ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ಲೋಪಗಳನ್ನೂ ತಿದ್ದುಪಡಿ ಮಾಡಬೇಕು. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಂಡು ಬಂದ ಮತಪಟ್ಟಿಗಳಲ್ಲಿನ ಅಕ್ರಮಗಳು ಮರುಕಳಿಸಬಾರದು ಎಂದು ಎಚ್ಚರಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜವಾಬ್ದಾರಿ ರಾಜ್ಯ ಚುನಾವಣಾ ಆಯೋಗದಾದರೂ, ಮತದಾರರ ಪಟ್ಟಿ ಪರಿಷ್ಕರಣೆ ರಾಜ್ಯ ಸರ್ಕಾರದ ಅಧಿಕಾರಿಗಳ ಹೊಣೆ ಎಂದು ವಿವರಿಸಿದರು. ಈ ಸಂಬಂಧ ಸಚಿವರು ಮತ್ತು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಬೂತ್ ಮಟ್ಟದ ಕಾರ್ಯಕರ್ತರು ಮತಪಟ್ಟಿಯ ಪರಿಶೀಲನೆ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಹಿಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಕಳೆದುಹಾಕುವುದು, ಇತರ ರಾಜ್ಯಗಳಿಂದ ನಕಲಿ ಮತದಾರರನ್ನು ಸೇರ್ಪಡೆ ಮಾಡುವುದು, ಒಬ್ಬ ವ್ಯಕ್ತಿಯ ಹೆಸರು ಹಲವೆಡೆ ಇದ್ದಂತಹ ಅಕ್ರಮಗಳು ಕಂಡುಬಂದಿದ್ದವು ಎಂದು ಸುರ್ಜೇವಾಲಾ ಬೇಸರ ವ್ಯಕ್ತಪಡಿಸಿದರು.

ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತು, “ಪಕ್ಷ ನಿಷ್ಠರು ಮೊದಲ ಆದ್ಯತೆಯಾಗಬೇಕು. ವಲಸಿಗ ಅಭ್ಯರ್ಥಿಗಳ ಸಂಖ್ಯೆಯು ಶೇ.10 ರಲ್ಲಿ ಮಿತವಾಗಿರಬೇಕು. ಅನಿವಾರ್ಯವಾಗಿ ಟಿಕೆಟ್ ನೀಡಬೇಕಾದರೆ ಸ್ಥಳೀಯ ನಾಯಕರೊಂದಿಗೆ ಸಮಾಲೋಚನೆ ಅವಶ್ಯಕ” ಎಂದು ಸ್ಪಷ್ಟಪಡಿಸಿದರು.

ಪ್ರತಿ ಕ್ಷೇತ್ರದ ಚುನಾವಣಾ ಉಸ್ತುವಾರಿ ನೇಮಕಕ್ಕಾಗಿ ಸಚಿವರು ಹಾಗೂ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಿ ಈ ತಿಂಗಳ ಅಂತ್ಯಕ್ಕೆ ಎಐಸಿಸಿ ಕೇಂದ್ರಕ್ಕೆ ಸಲ್ಲಿಸಬೇಕು ಎಂಬ ನಿರ್ದೇಶನವನ್ನೂ ಅವರು ನೀಡಿದ್ದಾರೆ.

- Advertisement -

Latest Posts

Don't Miss