- Advertisement -
ಬೆಂಗಳೂರು(ಫೆ.18): ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ, ಎಂ. ಚಂದ್ರಪ್ಪ ಹೊಳಲ್ಕೆರೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ಕಾಯಕ ಶರಣರ ಜಯಂತಿಯ ನಿಮಿತ್ತ ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿಯ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೊಲ್ಕೆರೆ ತಹಶೀಲ್ದಾರರಾದ ಶ್ರೀಮತಿ ಮಾಲತಿ, ಸಮಾಜದ ಮುಖಂಡರುಗಳಾದ ಶ್ರೀ ಸುಂದರ್ ಮೂರ್ತಿ, ಶ್ರೀ ನವೀನ್, ಶ್ರೀ ಪ್ರಬಣ್ಣ, ಶ್ರೀನಿವಾಸ್ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನೇನು ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವ ಹಿನ್ನಲೆಯಲ್ಲಿ ಶಾಸಕರು, ಟಿಕೇಟ್ ಆಕಾಂಕ್ಷಿಗಳು ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯಗಳತ್ತ ಮುನ್ನಡೆಯುತ್ತಿದ್ದಾರೆ. ಈ ಶಿವರಾತ್ರಿಯ ಪ್ರಯುಕ್ತವೂ ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿರೋದು ವಿಶೇಷವಾಗಿ ಕಂಡುಬರುತ್ತಿದೆ.
- Advertisement -