2008ರಲ್ಲಿ ಪ್ರಸಾರವಾಗುತ್ತಿದ್ದ ಚಾಂದ್ ಕೇ ಪಾರ್ ಚಲೋ ಧಾರಾವಾಹಿ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು.ಸಿನಿಮಾರಂಗದಲ್ಲಿ ಸಕ್ರೀಯರಾದ ಯಾಮಿ ಸ್ಟಾರ್ ಆಗಿದ್ದರೂ ಸರಳತೆ ಮೂಲಕವೇ ಹೆಚ್ಚು ಗಮನಸೆಳೆದ ನಟಿ. ಹೆಚ್ಚು ಪ್ರಚಾರ ಬಯಸದ ಯಾಮಿ ತನ್ನ ಪ್ರತಿಭೆ ಮೂಲಕವೇ ಅಭಿಮಾನಿಗಳ ಹೃದಯ ಗೆದಿದ್ದಾರೆ. ಸದ್ಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯಾಮಿ, ಸಿನಿಮಾರಂಗ ತೊರೆಯಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಸಿನಿಮಾರಂಗದಿಂದ ಹೊರಬಂದು ಕೃಷಿ ಮಾಡಬೇಕೆಂದು ಬಯಸಿದ್ದರಂತೆ. ಪಾರ್ಟಿ, ಹಾಗೂ ಈವೆಂಟ್ ಗಳಿಗೆ ಹಾಜರಾಗುವಂತೆ ಹೇಗೆ ಒತ್ತಡ ಹೇರುತ್ತಾರೆ, ಅಗೌರವ ತೋರುತ್ತಾರೆ, ನಿರಂತರ ತೆಗಳುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.

‘ಈ ನಗರ ನಿಮ್ಮನ್ನು ಪರೀಕ್ಷಿಸುತ್ತದೆ ಮತ್ತು ನಿಮ್ಮನ್ನು ಬ್ರೇಕ್ ಮಾಡುತ್ತದೆ. ನನ್ನ ಜೀವನದಲ್ಲೂ ಅಂಥ ಸಮಯ ಬಂದಿತ್ತು. ಹಿಮಾಚಲ ಪ್ರದೇಶದಲ್ಲಿ ನನಗೆ ಸ್ವಲ್ಪ ಭೂಮಿ ಇದೆ, ಮತ್ತು ಈ ಸಿನಿಮಾ ಕೆಲಸ ಮಾಡದಿದ್ದರೆ ನಾನು ಕೃಷಿಯನ್ನು ತೆಗೆದುಕೊಳ್ಳುತ್ತೇನೆ ಎಂದು ನಾನು ಭಾವಿಸಿದ್ದೆ’ ಎಂದು ಹೇಳಿದ್ದಾರೆ




