ಕಾಂಗ್ರೆಸ್ CM ಕುರ್ಚಿ ಕಿತ್ತಾಟಕ್ಕೆ ಸ್ವಾಮೀಜಿಗಳ ಎಂಟ್ರಿ!

ಯಾರಾಗಬೇಕು ಮುಂದಿನ ಮುಖ್ಯಮಂತ್ರಿ? ಕಾಂಗ್ರೆಸ್‌ನ ನಾಯತ್ವ ಬದಲಾವಣೆಯ ಚರ್ಚೆ ಗರಿಗೆದರುತ್ತಿರುವ ಸಂದರ್ಭದಲ್ಲಿ, ಈಗ ಧಾರ್ಮಿಕ ವಲಯದಿಂದಲೂ ಡಿಕೆ ಶಿವಕುಮಾರ್ ಪರ ಧ್ವನಿಗಳು ಕೇಳಿಬರುತ್ತಿವೆ.
ಶಿರಾದ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಡಿಕೆಶಿಗೂ ಒಂದು ಅವಕಾಶ ಕೊಡಲೇಬೇಕು ಎಂದು ಹೈಕಮಾಂಡ್‌ಗೆ ಸಂದೇಶ ನೀಡಿದ್ದಾರೆ.

ನಂಜಾವಧೂತ ಸ್ವಾಮೀಜಿ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ವಿರುದ್ಧ ನಡೆಯುತ್ತಿರುವ ರಾಜಕೀಯದ ಬಗ್ಗೆ ನೇರವಾಗಿ ಪ್ರಶ್ನೆ ಎತ್ತಿದರು. ಡಿಕೆಶಿಗೆ ಯಾಕೆ ಹಿನ್ನಡೆಯಾಗಬೇಕು? ಅವರು ಕೂಡ ಅಹಿಂದ ಸಮುದಾಯದ ನಾಯಕನೇ ಅಲ್ಲವಾ? ಎಂದಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ‘ಅಹಿಂದ’ ಕಾರ್ಡ್ ಈಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಇದುವರೆಗೆ ಅಹಿಂದ ಸಮುದಾಯ ಎಂದರೆ ಸಿದ್ದರಾಮಯ್ಯ ಬಣಕ್ಕೆ ಸೇರಿದರೆಂಬ ಧಾರಣೆಯ ನಡುವೆ, ಡಿಕೆಶಿಯನ್ನು ಕೂಡ ಅಹಿಂದ ಸಮುದಾಯದ ನಾಯಕನೆಂದು ಪ್ರಸ್ತಾಪಿಸಿ, ಸ್ವಾಮೀಜಿಗಳು ಹೊಸ ಸಮೀಕರಣ ಮೂಡಿಸಿದ್ದಾರೆ.

ಸಮುದಾಯದ ಅಗ್ರಗಣ್ಯ ನಾಯಕ, ಪಕ್ಷಕ್ಕೆ ಕೊಟ್ಟ ಕೊಡುಗೆ ಮರೆಯಲಾಗಲ್ಲ. ಅವರು ಪಟ್ಟ ನೋವು ಯಾರು ಪಟ್ಟಿಲ್ಲ. ಬಹಳ ಇಕ್ಕಟ್ಟಿನ ವೇಳೆ ಅಧ್ಯಕ್ಷ ಸ್ಥಾನ ಕೊಟ್ರು. ಆಸಂದರ್ಭದಲ್ಲೂ ಎದೆಗುಂದದೆ ಪಕ್ಷ ಕಟ್ಟಿದ್ದಾರೆ. ಎಲ್ಲಾ ವರ್ಗದ ಸಮಾಜ ಶಿವಕುಮಾರ್ ಪರ ಇದೆ. ಮೊದಲು ಅಲ್ಲಿ ಇತ್ಯರ್ಥ ಆಗಲಿ. ಶಿವಕುಮಾರ್​ಗೂ ಒಂದು ಅವಕಾಶ ಕೊಡಲಿ ಎಂದು ನಂಜಾವಧೂತ ಶ್ರೀಗಳು ಆಗ್ರಹಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

 

About The Author