ಮಾರ್ಕ್ಸ್ ಕಾರ್ಡ್ ನಲ್ಲಿ ವಿದ್ಯಾರ್ಥಿ ಬದಲು ಸ್ವಾಮಿಜಿಯ ಫೋಟೋ!

ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಗಂಭೀರ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ. ವಿದ್ಯಾರ್ಥಿಯ ಮಾರ್ಕ್ಸ್ ಕಾರ್ಡ್‌ನಲ್ಲಿ ವಿದ್ಯಾರ್ಥಿಯ ಬದಲು ಸ್ವಾಮಿಜಿಯೊಬ್ಬರ ಫೋಟೋ ಪ್ರಿಂಟ್ ಆಗಿ ಯಡವಟ್ಟಾಗಿದೆ.

ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯ ಪೋಟೋ ಬದಲು ಸ್ವಾಮಿಜಿಯೊಬ್ಬರ ಚಿತ್ರವೊಂದು ಮುದ್ರಣವಾಗಿದೆ. ಈ ಸಂಬಂಧ ಈಗ ಸಂಸ್ಥೆ ಸ್ಪಷ್ಟನೆ ನೀಡಿದ್ದು, ತಪ್ಪು ಎಲ್ಲ online ಪ್ರಕ್ರಿಯೆಯಿಂದ ಸಂಭವಿಸಿದೆ. ನಮ್ಮ ತಪ್ಪಿಲ್ಲ ಎಂದು ತಿಳಿಸಿದೆ.

ವಿಶ್ವವಿದ್ಯಾಲಯದ ಅಧಿಕಾರಿಗಳ ಪ್ರಕಾರ, ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಮಾಹಿತಿ ಹಾಗೂ ಪೋಟೋಗಳನ್ನು UUCMS ವೆಬ್ ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಪೋರ್ಟ್‌ಲ್‌ನಲ್ಲಿ ವಿದ್ಯಾರ್ಥಿ ಸ್ವತಃ ತಪ್ಪು ಪೋಟೋವನ್ನು ಅಪ್ಲೋಡ್ ಮಾಡಿದ ಕಾರಣದಿಂದ ಈ ತಪ್ಪು ನಡೆದಿದೆ.

ನಾವು ಈ ಮಾಹಿತಿಯನ್ನು ಪರಿಶೀಲಿಸುವುದಿಲ್ಲ. UUCMS ನಿಂದ ನಮಗೆ ಮುದ್ರಿತ ರೂಪದಲ್ಲಿ ಮಾರ್ಕ್ಸ್ ಕಾರ್ಡ್ ಬರುತ್ತದೆ. ನಾವು ಆ ಡಾಕ್ಯುಮೆಂಟ್ ಅನ್ನು ಪ್ರಿಂಟ್ ಮಾಡಿ ವಿದ್ಯಾರ್ಥಿಗಳಿಗೆ ನೀಡುವುದಷ್ಟೇ ನಮ್ಮ ಜವಾಬ್ದಾರಿ ಎಂದು ಸಂಸ್ಥೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದು ಕೇವಲ ಈ ವಿದ್ಯಾರ್ಥಿಯ ದಲ್ಲ. ಇನ್ನೂ ಕೆಲವರು ಸೆಲ್ಫಿ ಹಾಕಿದ್ದಾರೆ, ಕೆಲವರು ಗೂಗಲ್ ಪೋಟೋ ಹಾಕಿದ್ದಾರೆ. ಈ ಬಗ್ಗೆ ನಿಖರತೆಗಾಗಿ ವಿಶ್ವವಿದ್ಯಾಲಯ ಈಗ ಎಲ್ಲ ವಿದ್ಯಾರ್ಥಿಗಳಿಂದ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಿದೆ. ಅವರು ನೀಡಿದ ಸರಿಯಾದ ಮಾಹಿತಿಯನ್ನು ಆಧರಿಸಿ ಹೊಸ ಮಾರ್ಕ್ಸ್ ಕಾರ್ಡ್‌ಗಳನ್ನು ಮುದ್ರಿಸಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author