ಹಾಸನ: ಹಾಸನಕ್ಕೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಲು ಆಗಮಿಸಿದ್ದ ಸಚಿವ ಬೈರತಿ ಸುರೇಶ್ ಅವರು ವೇದಿಕೆಯ ಮೇಲೆ ಜನರನ್ನುದ್ದೇಶಿಸಿ ಮಾತನಾಡಿದರು.
ಸಿದ್ದರಾಮಯ್ಯ ಒಂದು ಜಾತಿಯ ನಾಯಕರಲ್ಲ ಎಲ್ಲಾ ವರ್ಗಕ್ಕೆ ಸೇರಿದವರು. ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಅಳವಡಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಪ್ರಜಾಸತಾತ್ಮಕ , ಜನರು, ಶಾಸಕರು ಹಾಗೂ ಎಐಸಿಸಿ ಬೆಂಬಲದಿಂದ ಮುಖ್ಯಮಂತ್ರಿ ಆದವರು ಎಂದು ಸಚಿವ ಬೈರತಿ ಸುರೇಶ್ ಗುಣಗಾನ ಮಾಡಿದರು.
ಮೊದಲೆಲ್ಲ ಮುಂದಿನ ಮುಖ್ಯಮಂತ್ರಿ ಬೈರತಿ ಸುರೇಶ್ ಎಂದು ಹೇಳ್ತಾಯಿದ್ದರು. ಆದರೆ ದೇಶದಲ್ಲಿ ಅಥವಾ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸ್ಥಾನಕ್ಕೆ ಹೋಗಲು ಯಾರಿಂದಲೂ ಸಾಧ್ಯವಿಲ್ಲ ಇನ್ನೊಬ್ಬ ಸಿದ್ದರಾಮಯ್ಯ ಹುಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಕಾಲವಿಳಂಭವಿಲ್ಲದೆ ನುಡಿದಂತೆ ನಡೆದ ಸರ್ಕಾರ ಎಂದು ಹೇಳಿದರು.
ಇನ್ನು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕುರಿತು ಮಾತನಾಡಿದ ಭೈರತಿ ಸುರೇಶ್ ಅವರು ನಾವು ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ 2 ಲಕ್ಷ ಜನ ಸೇರುವ ನಿರೀಕ್ಷೆ ಇತ್ತು ಆದರೆ ಇಡಿ ರಾಜ್ಯದಿಂದ ಆಗಮಿಸಿದ ಜನ 17 ಲಕ್ಷಕ್ಕೆ ದಾಟಿತ್ತು. ಇದು ಪ್ರಪಂಚದಲ್ಲೇ ಅತಿ ಹೆಚ್ಚು ದೊಡ್ಡ ಕಾರ್ಯಕ್ರಮ ಎನಿಸಿತ್ತು. ಇದು ಅವರ ಮೇಲೆ ಇರುವ ಜನರ ಅಭಿಮಾನ ಎಂದು ಹೊಗಳಿದರು.
ಬಿಜೆಪಿಯವರು ಅನ್ನಭಾಗ್ಯ ಯೋಜನೆಯಲ್ಲಿ ಕೊಡುವ ಐದು ಕೆಜಿ ಅಕ್ಕಿಯನ್ನು ನಿಲ್ಲಿಸಿದರು ಆದರೆ ಅಕ್ಕಿ ಕೊಡದೆ ಹೋದರೂ ಅವರ ಖಾತೆಗೆ ಅಕ್ಕಿ ಹಣವನ್ನು ನೇರವಾಗಿ ಹಾಕಲಾಗುತ್ತಿದೆ.
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ ಗೃಹಲಕ್ಷ್ಮಿ ಯೋಜನೆಯಿಂದ ಮನೆಯೊಡತಿಗೆ ಎರಡು ಸಾವಿರ ರೂ ನೀಡಲಾಗುತ್ತಿದೆ. ಈ ಯೋಜನೆಗಳಿಗೆ ವಾರ್ಷಿಕ ೬೦ ಸಾವಿರ ಕೋಟಿ ವೆಚ್ಚವಾಗಲಿದೆ. ಬಿಜೆಪಿಯವರು ೪೦% ಹೊಡೆಯುವ ದುಡ್ಡನ್ನು ಬಡವರ ಯೋಜನೆಗಳಿಗೆ ಮೀಸಲಿಡಲಾಗಿದೆ.
ಹಾಸನ ಜಿಲ್ಲೆಯಲ್ಲಿ ಕುರುಬ ಸಮುದಾಯದ ನಾಯಕರನ್ನು ಗುರುತಿಸಿ ಜಿಲ್ಲೆಯಿಂದ ಒಬ್ಬ ಎಂ.ಎಲ್.ಎ ಮಾಡಬೇಕು ಇದಕ್ಕಾಗಿ ನೀವು ಸಂಘಟಿತರಾಗಬೇಕು ಸಿದ್ದರಾಮಯ್ಯ ಅವರು ಆಧುನಿಕ ಸಂಗೊಳ್ಳಿ ರಾಯಣ್ಣ ಎಂದರು ಸಿದ್ದರಾಮಯ್ಯ ಕ್ಯಾನ್ವಾಸ್ ಬಂದಿದ್ರೆ ಶ್ರೇಯಸ್ ಗೆಲ್ತಿದ್ರು ಮುಂದಿನ ದಿನಗಳಲ್ಲಿ ಶ್ರೇಯಸ್ ಪಾಟೀಲ್ ನ ಶಾಸಕನಾಗಿ ನೋಡಲು ಬಯಸುತ್ತೇನೆ ಎಂದು ಭವಿಷ್ಯದ ಬಯಕೆಯನ್ನು ವ್ಯಕ್ತಪಡಿಸಿದರು.
Yatindra Siddaramaiah: ಹಾಸನಕ್ಕೆ ಮೊದಲ ಬಾರಿ ಯತೀಂದ್ರ ಸಿದ್ದರಾಮಯ್ಯ;
police: ಧಾರವಾಡದ ನೂತನ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡ ಗೋಪಾಲ್ ಬ್ಯಾಕೋಡ್
Cricket: ಪಾಕ್ ವಿರುದ್ದ ಭಾರತ ಗೆಲುವು ಸಾಧಿಸಲಿ ಎಂದು ಕ್ರೀಡಾಭಿಮಾನಿಗಳಿಂದ ಪೂಜೆ..!