Friday, October 24, 2025

Latest Posts

ಟಿ.ಬಿ. ಜಯಚಂದ್ರರಿಗೆ ಸಚಿವ ಸ್ಥಾನ ಬೇಕೇ ಬೇಕು!

- Advertisement -

ತುಮಕೂರು:ರಾಜ್ಯದ ಹಿರಿಯ ಹಾಗೂ ಅನುಭವಿ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಶಿರಾ ಕ್ಷೇತ್ರದ ಶಾಸಕ ಮತ್ತು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರರಿಗೆ ಬರುವ ನವೆಂಬರ್‌ನಲ್ಲಿ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಭಲ ಸಚಿವ ಸ್ಥಾನ ನೀಡಬೇಕೆಂದು ಶಿರಾ ತಾಲ್ಲೂಕು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

ಹೊಸೂರು ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿರಾ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಮಾತನಾಡಿ, ಟಿ.ಬಿ. ಜಯಚಂದ್ರ ಅವರು ಸಚಿವರಾಗಿದ್ದ ಸಮಯದಲ್ಲಿ ಅನೇಕ ಜನಪರ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಜನಮನ ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮೂರ್ಖಣ್ಣಪ್ಪ, ಯೋಗಾನಂದ, ಕರೀನಾಯಕ, ಶಿವಣ್ಣ, ಮಂಜುನಾಥ್, ಓಬಳೇಶ್, ಕರೆಗುಂಡನ ನಾಯಕ, ಮದಕರಿ ನಾಯಕ, ಹನುಮಂತ, ಶಿವಧೀರಪ್ಪ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಪುಟ್ಟ ಜುಂಜಯ್ಯ ಸೇರಿದಂತೆ ಹಲವರು ಹಾಜರಿದ್ದರು. ನಾಯಕರು ಒಟ್ಟಾಗಿ ಜಯಚಂದ್ರರಿಗೆ ಸಚಿವ ಸ್ಥಾನ ನೀಡುವುದು ಶಿರಾ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ ಎಂದು ಅಭಿಪ್ರಾಯಪಟ್ಟರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss