Sunday, September 8, 2024

Latest Posts

SA vs AF : ಹರಿಣಗಳು ಫೈನಲ್‌ಗೆ ; ಕಮರಿದ ಆಫ್ಘನ್ ಆಸೆ

- Advertisement -

ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ತಾನಸ್ತಾನ ತಂಡ ಸೋಲಿನ ಕಹಿ ಅನುಭವಿಸಿದರೆ, ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಇದೇ ಮೊದಲ ಬಾರಿಗೆ ಆಫ್ಘನ್ ತಂಡ ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೇರಿತ್ತು. ಆದರೆ ಅಫ್ಘಾನಿಸ್ತಾನ ತಂಡವನ್ನು ಮಣಿಸಿದ ಸೌತ್ ಆಫ್ರಿಕಾ ತಂಡ ಕೂಡ ಮೊದಲ ಬಾರಿಗೆ ಫೈನಲ್​‌ಗೆ ಪ್ರವೇಶ ನೀಡಿದೆ.​ ಐಡೆನ್ ಮಾರ್ಕ್ರಾಮ್ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದ ಮೊದಲ ದಕ್ಷಿಣ ಆಫ್ರಿಕ ತಂಡದ ಕ್ಯಾಪ್ಟನ್ ಎನಿಸಿಕೊಂಡರು.

ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ನಿರ್ಣಯ ಸಮರ್ಥಿಸಿಕೊಳ್ಳುವಂತಿರಲಿಲ್ಲ, ಏಕೆಂದರೆ ಓಪನರ್ ಆಗಿ ಬಂದ ಗುರ್ಬಾಜ್ ಹಾಗೂ ಜರ್ದಾನ್ ತಂಡಕ್ಕೆ ಉತ್ತಮ ಆರಂಭ ನೀಡಲಿಲ್ಲ. ಗುರ್ಬಾಜ್ ಶೂನ್ಯಕ್ಕೆ ಔಟ್ ಆದರೆ, ಜರ್ದಾನ್ 2 ರನ್​ ಗಳಿಸಿ ಔಟ್ ಆದರು. ಅಜ್ಮತುಲ್ಲಾ ಗಳಿಸಿದ 10ರನ್ ಈ ಪಂದ್ಯದಲ್ಲಿ ಆಫ್ಘನ್ ತಂಡದ ಪರವಾಗಿ ವೈಯಕ್ತಿಕ ಗರಿಷ್ಠ ರನ್​ ಆಯಿತು. ಉಳಿದ ಪ್ಲೇಯರ್ಸ್​ ಯಾರೂ 2ಅಂಕಿಯ ಗಡಿ ಕೂಡ ದಾಟಲಿಲ್ಲ.ಬ್ಯಾಟರ್​​ಗಳ ನೀರಸ ಪ್ರದರ್ಶನದಿಂದ ಅಫ್ಘಾನ್​ ತಂಡ 11.5 ಓವರ್​‌ಗಳಲ್ಲಿ ಕೇವಲ 56 ರನ್‌ಗಳಿಗೆ ಆಲೌಟ್ ಆಯಿತು.

ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಮಾರ್ಕೋ ಯಾನ್ಸನ್ ಪ್ರಮುಖ 3ವಿಕೆಟ್ ಪಡೆದು ಮಿಂಚಿದರೆ, ಶಂಸಿ 3, ರಬಾಡ ಹಾಗೂ ನೋಕಿಯೆ ತಲಾ 2 ವಿಕೆಟ್ ಪಡೆದು ಆಫ್ಘಾನ್ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು. ಈ ಅಲ್ಪಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. 5 ರನ್​ ಗಳಿಸಿದ ಡಿಕಾಕ್​ ಫಾರೂಕಿಗೆ ವಿಕೆಟ್​ ಒಪ್ಪಿಸಿದರು. ಆದರೆ ಇದು ದೊಡ್ಡ ವ್ಯತ್ಯಾಸವೇನು ಮಾಡಲಿಲ್ಲ. ಕಡಿಮೆ ರನ್ ಗುರಿಯಿದ್ದ ಕಾರಣ 8.5 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 60 ಗಳಿಸಿ ನಿರಾಯಾಸವಾಗಿ ಗೆಲುವು ದಾಖಲಿಸಿತು.ರೀಜಾ ಹೆಂಡ್ರಿಕ್ಸ್ 29, ಹಾಗೂ ಕ್ಯಾಪ್ಟನ್​ ಐಡೆನ್ ಮಾರ್ಕ್ರಾಮ್ 23 ರನ್​ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಸೇಮೀಸ್ ಗೆಲುವಿನ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಸೂಪರ್-8 ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್​ ಕನಸು ಕಂಡಿದ್ದ ಅಫ್ಘಾನಿಸ್ತಾನ ತಂಡ ಈಗ ಟೂರ್ನಿಯಿಂದ ಹೊರ ಬಿದ್ದಿದೆ. ಈ ಮೂಲಕ ವಿಶ್ವ ಕಿರೀಟದ ಕನಸು ಕಂಡಿದ್ದ ಆಪ್ಘನ್ ಆಟಗಾರರ ಹಾಗೂ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಿದೆ.

- Advertisement -

Latest Posts

Don't Miss