ಬೆಂಗಳೂರು: ನಿನ್ನೆ ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬವಿದ್ದು, ಸುಮಲತಾ ಅಂಬರೀಷ್ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಇಂದು ಅಭಿಷೇಕ್ ಮತ್ತು ಅವಿವಾ ವಿವಾಹದ ಆಮಂತ್ರಣ ಪತ್ರವನ್ನು ಅಂಬಿ ಸಮಾಧಿಯ ಮೇಲಿರಿಸಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ನಟ, ಅಭಿಷೇಕ್ ಅಂಬರೀಷ್, ಅವರ ಭಾವಿ ಪತ್ನಿ ಅವಿವಾ ಸೇರಿ ಹಲವರು ಉಪಸ್ಥಿತರಿದ್ದರು.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್...
ನಿನ್ನೆ ಡಾ. ಅಂಬರೀಶ್ ಅವರ 2ನೇ ಪುಣ್ಯಸ್ಮರಣೆ ಅಂಗವಾಗಿ ಬೆಂಗಳೂರಿನಲ್ಲಿ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿ, ಕೆಲ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಅದೇ ರೀತಿ ಇಂದು ರೆಬೆಲ್ ಸ್ಟಾರ್ ಹುಟ್ಟೂರಾದ ಮಂಡ್ಯ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮಗಳಲ್ಲಿ ಸಂಸದೆ ಸುಮಲತಾ ಅಂಬರೀಷ್ ಭಾಗಿಯಾಗಿದ್ದು, ಇವರಿಗೆ ಮಗ ಅಭಿಷೇಕ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್‌ಲೈನ್...