ಸಂಪುಟದಿಂದ ವಜಾಗೊಂಡ 2 ದಿನಗಳ ಕಾಲ, ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲೇ ಕೆ.ಎನ್. ರಾಜಣ್ಣ ಇದ್ರು. ಇಂದು ತುಮಕೂರಿನ ಮಧುಗಿರಿಗೆ ಭೇಟಿ ಕೊಟ್ಟಿದ್ದಾರೆ. 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ರಾಜಣ್ಣ ಅವರು ಮತ್ತೆ ತಮ್ಮ ಹಳೇ ಖದರ್‌ನಲ್ಲಿ ಮಾತನಾಡಿದ್ದಾರೆ.
ನನ್ನ ವಿರುದ್ಧ ಮೂವರಿಂದ ಪಿತೂರಿ ನಡೆದಿದೆ ಎಂದು ಕೆ.ಎನ್. ರಾಜಣ್ಣ ಆರೋಪಿಸಿದ್ದಾರೆ....
ಆಗಸ್ಟ್ 11ರಂದು ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಿಂದ ಕೆ.ಎನ್ ರಾಜಣ್ಣ ಅವರ ತಲೆದಂಡವಾಗಿದೆ. ಸಿಎಂ ಆಪ್ತರೂ ಎನ್ನುವುದನ್ನು ನೋಡದೇ ಹೈಕಮಾಂಡ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದೆ. ಇದಕ್ಕೆ ರಾಹುಲ್ ಗಾಂಧಿಗೆ ದೂರು ಕೊಟ್ಟಿರುವುದೇ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ದೂರು ಕೊಟ್ಟಿದ್ದು ಯಾರು ಅನ್ನೋ ಸತ್ಯ ಇದೀಗ ಬಯಲಾಗಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ,...
ಸಿದ್ದರಾಮಯ್ಯ ಸಂಪುಟದಿಂದ ವಜಾ ಆಗಿರುವ ಕೆ.ಎನ್ ರಾಜಣ್ಣ ಅವರು ಈಗ ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲ ಗೃಹ ಸಚಿವ ಪರಮೇಶ್ವರ್ ಜೊತೆ ರಾಜಣ್ಣ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ರಾಜೀನಾಮೆ ಕೊಟ್ಟ ಬಳಿಕ ರಾಜಣ್ಣ ಅವರು ಇದೊಂದು ಷಡ್ಯಂತ್ರ, ಪಿತೂರಿ ಎಂಬ ಹೇಳಿಕೆ ನೀಡಿದ್ದರು. ಇದೀಗ ಆಗಿರೋ ದೊಡ್ಡ ಅನಾಹುತವನ್ನ ಸರಿಪಡಿಸೋ ದಾರಿ ಹುಡುಕುತ್ತಿದ್ದಾರೆ.
ಪರಮೇಶ್ವರ್ ಜೊತೆ ಒಂದು...
ರಾಜ್ಯದಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ದಾಖಲೆ ಸಮೇತ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ನಾವು 16 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ, ಆಂತರಿಕ ಸಮೀಕ್ಷೆ ಹೇಳಿತ್ತು. ಆದರೆ ನಾವು 9 ರಲ್ಲಿ ಗೆದ್ದೆವು. 7 ರಲ್ಲಿ ಅನಿರೀಕ್ಷಿತವಾಗಿ ಜಯವನ್ನ ಕಳೆದುಕೊಂಡೆವು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲೂ ಅಕ್ರಮ ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರು ಕೇಂದ್ರ...
ಬಿಜೆಪಿ ವಿರುದ್ಧದ ಮತಗಳ್ಳತನ ಆರೋಪಕ್ಕೆ, ಕಾಂಗ್ರೆಸ್ ಪಕ್ಷ ದಾಖಲೆಗಳನ್ನು ರಿಲೀಸ್ ಮಾಡಿದೆ. ದೆಹಲಿಯಲ್ಲಿ ಸಂಸದ ರಾಹುಲ್ ಗಾಂಧಿ, ಸಾಕ್ಷಿ ಸಮೇತ ಪ್ರತೀ ವಿಚಾರವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಮತಗಳ್ಳತನ ವಿರುದ್ಧದ ಹೋರಾಟ ನಡೀತಿದ್ದು, ಒಂದು ದಿನಕ್ಕೂ ಮುಂಚೆಯೇ ಸಾಕ್ಷಿ ಬಹಿರಂಗಪಡಿಸಿದ್ದಾರೆ.
ರಾಹುಲ್ ಪ್ರಕಾರ 5 ರೀತಿಯ ಮತಗಳ್ಳತನ ನಡೆದಿದೆಯಂತೆ.
5 ರೀತಿಯ ಮತಗಳ್ಳತನ
1) ನಕಲಿ ಮತದಾರರು...
ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ. ನಾನೇ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತೇನೆ. ಅಲ್ಲದೆ ಮುಂಬರುವ ಚುನಾವಣೆಯನ್ನೂ ಸಹ ನನ್ನ ನೇತೃತ್ವದಲಿ ನಡೆಯುತ್ತದೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಶಾಸಕರು ಸೇರಿದಂತೆ ಹೈಕಮಾಂಡ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಇಷ್ಟು ದಿನಗಳ ಕಾಲ ಸಿಎಂ ಆಗಿ ಪ್ರಮೋಶನ್ ಪಡೆಯುವ ತವಕದಲ್ಲಿದ್ದ...
ನವದೆಹಲಿ : ಇಂದು ದಿಢೀರ್ ಎಐಸಿಸಿ ರಾಜ್ಯ ಕಾಂಗ್ರೆಸ್ ಮೇಲೆ ಸಮರ ಸಾರಿದೆ. ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನ ಹೊರತುಪಡಿಸಿ ಎಲ್ಲರನ್ನ ತತಕ್ಷಣದಿಂದಲೇ ವಜಾ ಮಾಡಿ ಆದೇಶ ಹೊರಡಿಸಿದೆ.. ದೆಹಲಿಗೆ ತೆರಳಿ ರಾಜ್ಯದಲ್ಲಿ ದೋಸ್ತಿ ಮುರಿದುಕೊಂಡು ಕಾಂಗ್ರೆಸ್ ಉಳಿಸಿ ಇಲ್ಲವೇ ಮುಂದೆ ಸರ್ಕಾರ ಪತನವಾದ್ರೆ ನಾನು ಹೊಣೆಯಲ್ಲ ಅಂತ ಸಿದ್ದರಾಮಯ್ಯ ಎ.ಕೆ ಆ್ಯಂಟನಿಗೆ ಹೇಳಿದ ಬೆನ್ನಲ್ಲೆ...