ಅಕ್ಟೋಬರ್17ರ ಶುಕ್ರವಾರ, ಈ ಇಬ್ಬರು ನಾಯಕರು ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಜೊತೆಗಿದ್ದವರನ್ನು ಹೊರಗೆ ಕಳುಹಿಸಿ, ಮಾತುಕತೆ ನಡೆಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ನಾಯಕತ್ವ ಬದಲಾವಣೆಯ ಕುರಿತು ಕೆಲವು ಸಚಿವರು ಹೇಳಿಕೆಯನ್ನು ನೀಡಿರುವುದಕ್ಕೆ ಕೆಪಿಸಿಸಿಯಿಂದ ನೋಟಿಸ್ ಜಾರಿಯಾಗಿದೆ. ಆದರೆ, ಇನ್ನೊಂದು ಕಡೆ ಮೈಸೂರಿನಲ್ಲಿ ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ ಎನ್ನುವ ಹೇಳಿಕೆಯನ್ನು ನೀಡುತ್ತಿರುವುದು, ಖರ್ಗೆಯವರ...