ಬೆಂಗಳೂರು : 26ನೇ ಕಾರ್ಗಿಲ್ ವಿಜಯ್ ದಿನದ ಅಂಗವಾಗಿ, ಸೈನಿಕರ ಶೌರ್ಯ ಮತ್ತು ತ್ಯಾಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಭಾರತೀಯ ಸೇನೆಯು ಮುಂದಾಗಿದೆ. ದೇಶದ ನಾಗರಿಕರು ಹುತಾತ್ಮರಿಗೆ ಇ-ಶ್ರದ್ದಾಂಜಲಿ ಸಲ್ಲಿಸುವ ವಿಶೇಷ ಪೋರ್ಟಲ್ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಸೇನೆಯು ಇಂದು ಪ್ರಾರಂಭಿಸಲಿದೆ.
1999ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿ...