www.karnatakatv.net: ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಸಮೀಪದ ಬೋರನಕಣಿವೆ ಜಲಾಶಯದಲ್ಲಿ ಸುಮಾರು 3 ಅಡಿ ಎತ್ತರದ ಆಂಜನೇಯಸ್ವಾಮಿ ಮೂರ್ತಿಯ ಕಲ್ಲಿನ ವಿಗ್ರಹ ಪತ್ತೆಯಾಗಿದೆ.
ಕಳೆದ 3 ದಿನಗಳಿಂದ ಇಲ್ಲಿನ ಬೋರನಕಣಿವೆ ಜಲಾಶಯದ ಕಾಲುವೆಯೊಳಗೆ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ. ಈ ವೇಳೆ ಕಲ್ಲಿನ ಆಂಜನೇಯ ವಿಗ್ರಹ ಪತ್ತೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು...