ಸಿನಿಮಾ ಪತ್ರಕರ್ತನಾಗಿ ಗುರುತಿಸಿಕೊಂಡಿರುವ ಯತಿರಾಜ್, ಈಗ ನಿರ್ದೇಶಕ ಹಾಗೂ ಕಲಾವಿದನಾಗೂ ಚಿರಪರಿಚಿತ. ಪ್ರಸ್ತುತ ಯತಿರಾಜ್ ನಿರ್ದೇಶಿಸಿ , ನಾಯಕನಾಗೂ ನಟಿಸುತ್ತಿರುವ "ಮಾಯಾಮೃಗ" ಚಿತ್ರದ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ಆರಂಭವಾಯಿತು. ಸ್ಥಳೀಯ ಮುಖಂಡರಾದ ರಾಜಣ್ಣ, ಜಯಣ್ಣ ಮುಂತಾದವರು ಚಿತ್ರೀಕರಣ ಆರಂಭದ ವೇಳೆ ಉಪಸ್ಥಿತರಿದ್ದು, ಶುಭ ಕೋರಿದರು. ಶ್ರೀರಂಗಪಟ್ಟಣದ ಸುತ್ತಮುತ್ತ ಇಪ್ಪತ್ತೈದು ದಿನಗಳ ಒಂದೇ ಹಂತದ...