ದೇಶದ ಪ್ರಮುಖ ವಾಹನ ಉತ್ಪಾದಕ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ವಿವಿಧ ಶ್ರೇಣಿಯ 17 ಹೊಸ ಟ್ರಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ದೆಹಲಿಯ ಭಾರತ ಮಂಟಪಂನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಈ ಟ್ರಕ್‌ಗಳನ್ನು ಅನಾವರಣಗೊಳಿಸಲಾಯಿತು.
ಚಾಲಕರ ಸುರಕ್ಷತೆ ಹಾಗೂ ವಾಹನ ಮಾಲೀಕರ ಲಾಭದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಹೊಸ ‘ಅಜುರಾ’ ಸರಣಿ, ಮೊದಲ ಬಾರಿಗೆ...