Health tips:
ಇಯರ್‌ಫೋನ್‌ಗಳನ್ನು ಹೆಚ್ಚಾಗಿ ಬಳಸುವವರು ಕಿವುಡರಾಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳುತ್ತದೆ. ಇಯರ್‌ಫೋನ್‌ಗಳನ್ನು ದೀರ್ಘಾವಧಿಯಲ್ಲಿ ಜೋರಾಗಿ ಕೇಳುವುದರಿಂದ ಶ್ರವಣ ಸಮಸ್ಯೆ ಉಂಟಾಗುತ್ತದೆ ಎಂದು ಎಚ್ಚರಿಸಿದೆ.
ಇಯರ್‌ಫೋನ್, ಇಯರ್‌ಬಡ್‌ಗಳು, ಹೆಡ್‌ಫೋನ್‌ಗಳು ನಮ್ಮ ದೇಹದಲ್ಲಿನ ಭಾಗವಾಗಿಬಿಟ್ಟಿವೆ. ಮನೆಯಲ್ಲಿರಲಿ, ಹೊರಗೆ ಹೋಗಲಿ, ಬಸ್ಸಿನಲ್ಲಿ ಪ್ರಯಾಣಿಸುವಾಗಲೂ ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡು ತಮ್ಮ ಲೋಕದಲ್ಲಿ ಮುಳುಗುತ್ತಾರೆ. ಫೋನಿನಲ್ಲಿ ಮಾತನಾಡುವುದು, ಹಾಡು ಕೇಳುವುದು,...