ರಾಜ್ಯದ ರೈತರಿಗೆ ವಂಚಿಸಿದ ತೆಲಂಗಾಣದ ವ್ಯಾಪಾರಿಗಳ ಕೇಸ್ ಮುಚ್ಚಿ ಹಾಕಲು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರಭಾವ ಬೀರಿದ್ದಾರೆ ಎನ್ನಲಾದ, ಪೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಚಿಕ್ಕಬಳ್ಳಾಪುರದ ಪೆರೆಸಂದ್ರ ಪಿಐಸ್‌ಐ ಜಗದೀಶ್ ರೆಡ್ಡಿ ಅವರಿಗೆ ಫೋನ್ ಮಾಡಿರುವ ಜಮೀರ್ ಅಹ್ಮದ್, ಕೇಸ್ ಸೆಟಲ್ ಮೆಂಟ್ ಮಾಡುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಆ ಆಡಿಯೋವನ್ನು...
ಮಾತಿಗೆ ಮಾತು, ಏಟಿಗೆ ಎದಿರೇಟು, ಕೌಂಟರ್‌ಗೆ ಎನ್‌ಕೌಂಟರ್ ಪದೇ ಪದೇ ಆಗುತ್ತಲೇ ಇದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ನಡುವೆ ಬಹಿರಂಗ ಚರ್ಚೆಯ ಸವಾಲು-ಪ್ರತಿಸವಾಲು ಮತ್ತೆ ತಾರಕಕ್ಕೇರಿದೆ.
DK-HDK ಕೌಂಟರ್ 1
ಎ ಖಾತಾ ಬಿ ಖಾತಾದಲ್ಲಿ ಭ್ರಷ್ಟಾಚಾರ ಆರೋಪ ಮಾಡಿದ್ದ ಹೆಚ್.ಡಿ. ಕುಮಾರಸ್ವಾಮಿಗೆ, ಯಾವುದಾದರೂ ಚಾನಲ್ ಎದುರು ಬನ್ನಿ ಎಂದು ನಾನೇ ಕರೆಯುತ್ತಿದ್ದೇನೆ...
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆ ವಿಚಾರ, ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಧಗಧಗಿಸುತ್ತಿದೆ. ಈ ಮಧ್ಯೆ ಜೆಡಿಎಸ್ ಪಾಳಯಲ್ಲೂ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಕೇಂದ್ರ ಸಚಿವ, ಹಾಲಿ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯಕ್ಕೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ಈ ವಿಷಯ...
ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿಯ ಕಿಚ್ಚು ಧಗಧಗಿಸುತ್ತಿದೆ. ಸಿಎಂ ಯಾರಾಗ್ತಾರೆ ಅನ್ನೋ ಚರ್ಚೆಗಳು ಜೋರಾಗಿವೆ. ಇಂಥಾ ಹೊತ್ತಲ್ಲಿ ಬಿಜೆಪಿಗರು, 2028ಕ್ಕೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಅಂತಾ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ನಾವು ಏನೇ ಮಾಡಿದ್ರೂ 2028ಕ್ಕೆ ಸಮ್ಮಿಶ್ರ ಸರ್ಕಾರ ರಚನೆ ಆಗಲಿದೆ. ಹೀಗಂತ ಸಂಸದ ಕೆ. ಸುಧಾಕರ್ ಭವಿಷ್ಯ ನುಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿ,...
ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರು ಜನರಿಗೆ, ಕಾಂಗ್ರೆಸ್ ಮಹಾ ದೋಖಾ ಮಾಡ್ತಿದೆ. ನೀವು ಹಬ್ಬವನ್ನು ಸಂತೋಷದಿಂದ ಆಚರಿಸಿ. ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ. ಹೀಗಂತ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಬಿ ಖಾತಾದಿಂದ ಎ ಖಾತಾ ಮಾಡಲು 5% ತೆರಿಗೆಯಿಂದ ಮಧ್ಯಮ ವರ್ಗವನ್ನು ಸುಟ್ಟು ಹಾಕುತ್ತಿದೆ....
ಕಲ್ಲು ತೂರಾಟ ಘಟನೆ ಬಳಿಕ ಮದ್ದೂರಿನಲ್ಲಿ, ಹಿಂದುತ್ವದ ಕೂಗು ಜೋರಾಗಿದೆ. ಈ ಅವಕಾಶವನ್ನೇ ಬಳಸಿಕೊಂಡು ರಾಜ್ಯ ಬಿಜೆಪಿ ನಾಯಕರು, ಮದ್ದೂರಿನಲ್ಲಿ ಹಿಂದುತ್ವದ ಕಹಳೆ ಮೊಳಗಿಸಿದ್ರು. ಬಳಿಕ ಹಿಂದೂ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಎಂಟ್ರಿ ಕೊಟ್ಟಿದ್ದಾರೆ.
ಸೆಪ್ಟೆಂಬರ್ 9ರಂದು ಬೆಳ್ಳಂಬೆಳಗ್ಗೆಯೇ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ದೌಡಾಯಿಸಿದ್ರು. ಮಧ್ಯಾಹ್ನದ ಬಳಿಕ...
ರಾಜ್ಯದಲ್ಲಿ ಬಿಡದಿ ಟೌನ್‌ಶಿಪ್ ಜಟಾಪಟಿ ತಾರಕಕ್ಕೇರಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವಿನ ಟಾಕ್ ವಾರ್ ಜೋರಾಗಿದೆ. ಈ ಬಾರಿ ಡಿ.ಕೆ. ಶಿವಕುಮಾರ್ ಆರೋಪಗಳಿಗೆಲ್ಲಾ, ನಿಖಿಲ್ ಕುಮಾರಸ್ವಾಮಿ ಖಡಕ್ ಟಾಂಗ್ ಕೊಟ್ಟಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರದಲ್ಲಿ ನಿಖಿಲ್ ಭಾಗಿಯಾಗಿದ್ರು. ಭಾಷಣದಲ್ಲಿ ಡಿಕೆಶಿ ವಿರುದ್ಧ ಗುಡುಗಿದ್ದಾರೆ.
ಮಿಸ್ಟರ್ ಶಿವಕುಮಾರ್ ಅವರೇ ಸುಳ್ಳು ನಿಮ್ಮನೆ ದೇವರು....
ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎಗೇ ವಹಿಸಬೇಕು. ವಿಪಕ್ಷ ಬಿಜೆಪಿ-ಜೆಡಿಎಸ್ ಆಗ್ರಹ ಜೋರಾಗಿದೆ. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲು ದೋಸ್ತಿ ನಾಯಕರು ಸಜ್ಜಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲು, ಹೆಚ್.ಡಿ. ಕುಮಾರಸ್ವಾಮಿ ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ಮಾತ್ರ ಎನ್‌ಐಎ ತನಿಖೆಯ ಅಗತ್ಯವಿಲ್ಲ ಅಂತಾ ಪದೇ ಪದೇ ಹೇಳ್ತಿದ್ದಾರೆ. ಆದರೆ ಧರ್ಮಸ್ಥಳ...
ಧರ್ಮಸ್ಥಳಕ್ಕೆ ಬೆಂಬಲ ವ್ಯಕ್ತಪಡಿಸುವ ಹೆಸರಿನಲ್ಲಿ ರಾಜಕೀಯ ಪೈಪೋಟಿ ಹೆಚ್ಚಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿಗಳಿಗೆ ಬೆಂಬಲ ಕೊಟ್ಟಿದ್ದಾರೆ. ಇದೀಗ ಕಾಂಗ್ರೆಸ್ ಕೂಡ ಶಾಂತಿ ಯಾತ್ರೆ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಲು ಸಜ್ಜಾಗಿದೆ.
ಧರ್ಮಸ್ಥಳ ಪ್ರಕರಣ ಸಂಬಂಧ SIT ರಚಿಸಿದ ಬಳಿಕ ಕಾಂಗ್ರೆಸ್ ನಾಯಕರು ಕ್ಷೇತ್ರಕ್ಕೆ ಭೇಟಿ ನೀಡದೆ ದೂರ ಉಳಿದಿದ್ದರು....
ಬಿಜೆಪಿಗರಿಗಿಂತ ಒಂದು ದಿನ ಮೊದಲೇ ನಡೆದ ಜೆಡಿಎಸ್‌ನ ಸತ್ಯಯಾತ್ರೆ ಯಶಸ್ವಿಯಾಗಿದೆ. ಆಗಸ್ಟ್ 31ರಂದು ಹಾಸನದಿಂದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹೊರಟ ಸತ್ಯ ಯಾತ್ರೆ, ಧರ್ಮಸ್ಥಳದಲ್ಲಿ ಕಹಳೆ ಮೊಳಗಿಸಿತ್ತು. ಎಲ್ಲಿ ನೋಡಿದ್ರೂ ಕೇಸರಿ ಬಾವುಟಗಳೇ ರಾರಾಜಿಸಿದ್ವು. ಧರ್ಮಸ್ಥಳದ ಪರ ನಾವಿದ್ದೇವೆ ಅಂತಾ ಸಾರಿ ಸಾರಿ ಹೇಳಿದಂತೆ ಭಾಸವಾಗಿತ್ತು.
ಸತ್ಯಯಾತ್ರೆಯ ಯಶಸ್ಸಿಗೆ ನಿಖಿಲ್ ಕುಮಾರಸ್ವಾಮಿ, ಟ್ವೀಟ್...
ರಾಜ್ಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ‘ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ನಿಯಮಗಳು – 2026’ ಅನ್ನು ಅಧಿಕೃತವಾಗಿ ಜಾರಿಗೊಳಿಸಿದೆ....