Saturday, November 15, 2025

#bjp news

BJP: ನಾ ಚಾಡಿಕೋರನಲ್ಲ – ಯತ್ನಾಳ್ ಕಂಪ್ಲಿಯಲ್ಲಿ 2ನೇ ರೌಂಡ್ ಹೋರಾಟ

ನಾವು ಚಾಡಿಕೋರರಲ್ಲ. ಹೈಕಮಾಂಡ್‌ಗೆ ದೂರು ನೀಡುವವರು ನಾವಲ್ಲ' ಅಂತ ಬಿಜೆಪಿಯ ಅತೃಪ್ತ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ ಟಾಂಗ್ ನೀಡಿದ್ದಾರೆ. ಯತ್ನಾಳ್ ಈ ಮಾತನ್ನಾಡೋ ಮೂಲಕ ಪರೋಕ್ಷವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ. ಖುದ್ದು ವಿಜಯೇಂದ್ರ ಅವರೇ ಬಂದು ನನ್ನನ್ನು ಮಾತನಾಡಿಸಿದರೂ ಮಾತನಾಡುವುದಿಲ್ಲ ಅಂತ ತೀಕ್ಷ್ಮವಾಗಿ ಹೇಳಿದ್ದಾರೆ. https://youtu.be/QBznUwmH2EM?si=wn1bFkMWOm2ogG5r   ಸುದ್ದಿಗಾರರೊಂದಿಗೆ ಮಾತನಾಡಿ, ಯಾರ ಬಗ್ಗೆಯೂ...

BJP: ರಾಜ್ಯಾಧ್ಯಕ್ಷ ಆಯ್ಕೆಗೆ ಎಲೆಕ್ಷನ್ ಆಂತರಿಕ ಚುನಾವಣೆಯಲ್ಲಿ ಗೆಲ್ಲೋದ್ಯಾರು.?

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತದೆ ಅಂತ ನಾನು ಹೇಳುವುದಿಲ್ಲ. ಆದರೆ, ಪ್ರಜಾಪ್ರಭುತ್ವ ನೆಲೆಯಲ್ಲಿ ನಮ್ಮ ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆ ದೇಶದಾದ್ಯಂತ ಜಾರಿಯಲ್ಲಿದೆ’ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಪಕ್ಷದ ಬೂತ್‌ ಹಂತದ ಚುನಾವಣೆಗಳು ಈಗಾಗಲೇ ಪೂರ್ಣಗೊಂಡಿದೆ. ಮಂಡಲ ಹಂತದ ಚುನಾವಣೆಗಳು ನಡೆಯುತ್ತಿವೆ. ಆ ಬಳಿಕ ಜಿಲ್ಲಾ...

TOP NEWS : ಇಂದಿನ ಪ್ರಮುಖ ಸುದ್ದಿಗಳು – 02/01/2025

1. ಕರ್ನಾಟಕ ಜನತೆಗೆ ಬಿಗ್ ಶಾಕ್,ಬಸ್‌ ಪ್ರಯಾಣ ದರ ಶೇ 15ರಷ್ಟು ಏರಿಕೆ ಶಕ್ತಿ ಯೋಜನೆ, ಡೀಸೆಲ್‌ ದರ ಏರಿಕೆ ಸೇರಿದಂತೆ ಇತ್ಯಾದಿ ಕಾರಣಗಳಿಂದ ಸರ್ಕಾರ ನಷ್ಟಕ್ಕೆ ಸಿಲುಕಿದೆ. ಹೀಗಾಗಿ ಅನಿವಾರ್ಯವಾಗಿ ಬಸ್‌ ಟಿಕೆಟ್‌ ದರವನ್ನು 15% ಏರಿಕೆ ಮಾಡಿದೆ.ಬಿಎಂಟಿಸಿ ಬಸ್ ದರ ಏರಿಕೆಯಾಗಿ 10 ವರ್ಷ ಆಗಿದ್ದರೆ ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷವಾಗಿದೆ....

Guwahati: ಕಾಂಗ್ರೆಸ್ ಪಾಪದಿಂದ ಪ್ರಕ್ಷುಬ್ಧ ಮಣಿಪುರ ಸಿಎಂ ಮಾತಿನ ಮರ್ಮ

ಕಾಂಗ್ರೆಸ್‌ ಟೀಕೆಗಳಿಗೆ ತಿರುಗೇಟು ನೀಡಿರುವ ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌, ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳ ಈ ಹಿಂದಿನ ಪಾಪಗಳಿಂದಾಗಿ ಮಣಿಪುರ ಇಂದು ಪ್ರಕ್ಷುಬ್ಧ ಸ್ಥಿತಿಯಲ್ಲಿದೆ ಎಂದು ವಾಗ್ದಾಳಿ ಮಾಡಿದ್ದಾರೆ. ಮೈತೇಯಿ-ಕುಕಿ ಸಂಘರ್ಷಕ್ಕೆ ಕ್ಷಮೆಯಾಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ ಎಂಬ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಪ್ರಶ್ನೆಗೆ...

BENGALURU: ಪೋಸ್ಟರ್ ಅಂಟಿಸಿ ಸೌಂದರ್ಯಕ್ಕೆ ಧಕ್ಕೆ CT ರವಿ & ಛಲವಾದಿ ವಿರುದ್ಧ FIR

ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ ಅಂಟಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದ ಆರೋಪದಡಿ ಬಿಜೆಪಿಯ 13 ಮುಖಂಡರ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ.ರವಿ, ಎನ್‌.ರವಿಕುಮಾರ್, ಮುಖಂಡರಾದ ಉಮೇಶ್‌ ಶೆಟ್ಟಿ, ಶಿವಕುಮಾರ್‌, ಹರ್ಷ ಹೆಗ್ಡೆ, ವೆಂಕಟ್‌, ಕರುಣಾಕರ್‌, ನಾಗೇಶ್‌, ಪ್ರಶಾಂತ್‌,...

BJP :ವಿಜಯೇಂದ್ರಗೆ ಶಾ ಸಪೋರ್ಟ್..? ದಿಢೀರ್ ದೆಹಲಿ ಭೇಟಿ ರಹಸ್ಯ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಭಿನ್ನಮತೀಯ ನಾಯಕರು ನಡೆಸುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಶಾ ಅವರಲ್ಲಿ ವಿಜಯೇಂದ್ರ ಮನವಿ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ 1 ವರ್ಷವಾದ್ದರಿಂದ ತಾವು ಮಾಡಿದ ಕೆಲಸಗಳ ಬಗ್ಗೆ ಈ ವೇಳೆ ಅಮಿತ್...

TOP NEWS : ಇಂದಿನ ಪ್ರಮುಖ ಸುದ್ದಿಗಳು – 01/01/2025

1. ಪ್ರಿಯಾಂಕ್ ವಿರುದ್ಧ ಪೋಸ್ಟರ್ ಅಭಿಯಾನ .13 ಬಿಜೆಪಿ ನಾಯಕರ ವಿರುದ್ಧ FIR ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ. ಇದೇ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಆರೋಪ ಪ್ರತ್ಯಾರೋಪಳು ಜೋರಾಗಿವೆ. ಈ ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿದ 13 ಬಿಜೆಪಿ ನಾಯಕರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್...

BJP : ಬಿಜೆಪಿ ರಾಜ್ಯಾಧ್ಯಕ್ಷ ಫೈಟ್ ಶೋಭಾ-ಬೊಮ್ಮಾಯಿ ಕಸರತ್ತು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿರ್ಗಮನ ಸಿದ್ಧತೆಯ ಹೊಸ್ತಿಲಲ್ಲೇ ರಾಜ್ಯ ಬಿಜೆಪಿಯ ಆಂತರಿಕ ರಾಜಕಾರಣವೂ ಹೊಸ ಸ್ವರೂಪ ಪಡೆಯುತ್ತಿದೆ. ನಡ್ಡಾ ನಿರ್ಗಮನಕ್ಕೆ ಮುನ್ನ ತಮ್ಮ ಅವಧಿ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶತಪ್ರಯತ್ನ ನಡೆಸುತ್ತಿದ್ದಾರೆ. ಅವರ ಪರವಾಗಿ ಯಡಿಯೂರಪ್ಪ ಕೂಡ ಬೆಂಗಾವಲಾಗಿ ನಿಂತಿದ್ದಾರೆ. ಇದಕ್ಕೆ ಪ್ರತಿಯಾಗಿ ವಿರೋಧಿ ಬಣವು ಹೊಸ...

CHENNAI: ಸ್ಟಾಲಿನ್ ಗೆ ಸರ್ಕಾರಕ್ಕೆ ರೇ*ಪ್ ಕೇಸ್ ಬಿಸಿ, ಅಣ್ಣಾಮಲೈ ನೇತೃತ್ವದಲ್ಲಿ ಹೊಸ ಹೋರಾಟ

ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ, ಸಂತ್ರಸ್ತೆಗೆ ನ್ಯಾಯ ಕೊಡಿಸುವ ಸಲುವಾಗಿ ಪಕ್ಷದ ಮಹಿಳಾ ಘಟಕದ ನೇತೃತ್ವದಲ್ಲಿ ‘ನ್ಯಾಯ ರ್‍ಯಾಲಿ’ ನಡೆಯಲಿದೆ’ ಎಂದು ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ‘ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳು ಡಿಎಂಕೆ ಪಕ್ಷದ ಸದಸ್ಯರಾಗಿದ್ದು, ಸತ್ಯವನ್ನು ಮರೆಮಾಚುವ...

KARNATAKA: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ! ಬಿಜೆಪಿಯಿಂದ ಒತ್ತಾಯ

ಸರ್ಕಾರಿ ಯೋಜನೆಗಳನ್ನು ಪಡೆಯಲು ಗುತ್ತಿಗೆದಾರರಿಗಿರುವ ಕಷ್ಟಗಳನ್ನು ಬಯಲು ಮಾಡಿದ್ದ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪುತ್ರ, ಆರ್ ಡಿ ಪಿ ಆರ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಹುಕೋಟಿ ಮಹರ್ಷಿ ವಾಲ್ಮೀಕಿ ಎಸ್. ಟಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಭಾಗಿಯಾಗಿರುವ ಆರೋಪದ...
- Advertisement -spot_img

Latest News

ಬಿಹಾರ ಎಫೆಕ್ಟ್- JDS ಫುಲ್ ಆಕ್ಟೀವ್! ಬಿಹಾರದ ಮೈತ್ರಿ ಕರ್ನಾಟಕದಲ್ಲೂ ಪ್ರಯೋಗ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದ ನಂತರ ಅದರ ರಾಜಕೀಯ ಕಂಪನಗಳು ಈಗ ಕರ್ನಾಟಕಕ್ಕೂ ತಲುಪಿವೆ. ಬಿಹಾರ ರಿಸಲ್ಟ್ ಪ್ರಾದೇಶಿಕ ಪಕ್ಷಗಳಿಗೆ ಬೂಸ್ಟ್...
- Advertisement -spot_img