ಬೆಂಗಳೂರು: ಕೆಆರ್ ಪುರ : ಕೆಆರ್‌ಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೇಟ್ ಫೈನಲ್ ಆಗಿದ್ದು, ಡಿ.ಕೆ.ಮೋಹನ್ ಬಾಬುಗೆ ಟಿಕೇಟ್ ಒಲಿದಿದೆ. ಟಿಕೇಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಕೇಂಬ್ರಿಡ್ಜ್ ವಿದ್ಯಾಸಂಸ್ಥೆಗಳ ಮಾಲೀಕರಾಗಿರುವಂಥ ಮೋಹನ್ ಬಾಬು, ನಾಳೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
https://karnatakatv.net/fighter-ravi-filed-nomination/
https://karnatakatv.net/with-the-support-of-thousands-of-activists-mla-ln-narayanaswamy-submitted-his-nomination-paper/
https://karnatakatv.net/shobha-karandlaje-outrage-against-jagadish-shetter/
ಬಾಗೇಪಲ್ಲಿಯಲ್ಲಿ ಸಿಪಿಐಎಂ ಅಭ್ಯರ್ಥಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ, ರ್ಯಾಲಿ ನಡೆಸಿದ್ದು, ಹಲವರು ಸಿಪಿಐಎಂ ಬಾವುಟ ಹಿಡಿದು, ಅನಿಲ್ ಕುಮಾರ್ಗೆ ಸಾಥ್ ಕೊಟ್ಟಿದ್ದಾರೆ.
ರೋಣ: ರೋಣ ಆಮ್ ಆದ್ಮಿ ಕ್ಷಕದ ಅಭ್ಯರ್ಥಿಯಾಗಿರುವ ಆನೇಕಲ್ ದೊಡ್ಡಯ್ಯ ಬೃಹತ್ ರ್ಯಾಲಿ ಮಾಡಿ, ತಮ್ಮನ್ನು ಗೆಲ್ಲಿಸುವಂತೆ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದ್ದಾರೆ. ರೋಡ್ ಶೋ ವೇಳೆ ಪಂಜಾಬ್ ಸಿಎಂ ಎಗಿರುವ ಭಗವಂತ್ ಮಾನ್, ಆನೇಕಲ್ ದೊಡ್ಡಯ್ಯರಿಗೆ ಸಾಥ್ ಕೊಟಿದ್ದಾರೆ.
ಈ ಬಗ್ಗೆ ಆನೇಕಲ್ ದೊಡ್ಡಯ್ಯ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ. ಸಾಥ್ ಕೊಟ್ಟ ಎಲ್ಲರಿಗೂ ಧನ್ಯವಾದ...
ದೇವನಹಳ್ಳಿ: ಪಟ್ಟಣದ ರಸ್ತೆಗಳೆಲ್ಲಾ ಮಂಗಳವಾರ ಸಂಪೂರ್ಣವಾಗಿ ಜೆಡಿಎಸ್ ಭದ್ರ ಕೋಟೆಯಾಗಿ ಮಾರ್ಪಾಡಾಗಿತ್ತು, ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದ ಜೆಡಿಎಸ್ ಕಾರ್ಯಕರ್ತರು, ಶಿಸ್ತಿನ ಸಿಪಾಯಿಗಳಂತೆ ಮೆರವಣಿಗೆ ಮಾಡಿಕೊಂಡು, ಶಾಸಕ ಎಲ್.ಎನ್.ನಾರಾಯಣಸ್ವಾಮಿರನ್ನು ಹೆಗಲ ಮೇಲೆತ್ತಿ ಮೆರವಣಿಗೆಯ ಮೂಲಕ ಸಾಗಿದರು.
ರಸ್ತೆಯುದ್ದಕ್ಕೂ ಶಾಸಕ, ದೇವೇಗೌಡ, ಕುಮಾರಸ್ವಾಮಿರವರ ಪರವಾದ ಘೋಷಣೆಗಳ ಧ್ವನಿ ಆಗಸದೆತ್ತರಕ್ಕೆ ಕೇಳಿಸುತಿತ್ತು, ಯುವ ಜೆಡಿಎಸ್ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸಿ...
ಜೆಡಿಎಸ್ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ಸದುದ್ದೇಶದಿಂದ ಭೂತರಾಜು ಎಂಬುವವರನ್ನು ಚಿಕ್ಕನಾಯಕನಹಳ್ಳಿ ತಾಲೂಕು ಯುವ ಜನತಾದಳ ಸಂಘಟನಾ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಇಂದು ನೇಮಕಾತಿಗೆ ಆದೇಶ ಪತ್ರವನ್ನ ಭೂತರಾಜು ಅವರಿಗೆ ನೀಡಲಾಯಿತು.
https://karnatakatv.net/hassan-congress-candidate-shreyas-statement/
https://karnatakatv.net/the-actress-was-caught-red-handed-when-she-was-engaged-in-prostitution/
https://karnatakatv.net/shobha-karandlaje-outrage-against-jagadish-shetter/
ಬೆಂಗಳೂರು: ಜಗದೀಶ ಶೆಟ್ಟರ್ ಅವರು ಧ್ವಜ ಬದಲಿಸಿದರೆ ಅವರ ವಿಚಾರವೂ ಬದಲಾಗುವುದೇ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗರು ಲಿಂಗಾಯತರನ್ನು ಒಡೆಯಲು ಮುಂದಾಗಿದ್ದರು. ಶೆಟ್ಟರ್ ಸಿಎಂ ಅಭ್ಯರ್ಥಿಯೇ?...
ಕೆಆರ್ ಪುರ: ಮಹದೇವಪುರ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಂಜುಳಾ ಅರವಿಂದ್ ನಿಂಬಾವಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಳೆದ ಬಾರಿ ಮೂರು ಸಲ ಶಾಸಕರಾಗಿದ್ದ ಅರವಿಂದ ನಿಂಬಾವಳಿಗೆ ಈ ಬಾರಿ ಟಿಕೇಟ್ ನಿರಾಕರಿಸಿದ್ದು, ಅವರ ಪತ್ನಿ ಮಂಜುಳಾರಿಗೆ ಟಿಕೇಟ್ ಸಿಕ್ಕಿದೆ. ಹಾಗಾಗಿ ಕೆಆರ್‌ಪುರದ ಬಿಇಓ ಕಚೇರಿಯಲ್ಲಿ ಮಂಜುಳಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ...
ಮಂಡ್ಯ: ಇಂದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಫೈಟರ್ ರವಿ ನಾಮಪತ್ರ ಸಲ್ಲಿಸಿದ್ದಾರೆ. ನಾಗಮಂಗಲ ವಿಧಾನ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದರು.
ಕಳೆದ 2 ವರ್ಷಗಳಿಂದ ಸಮಾಜ ಸೇವಕನಾಗಿ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ರವಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಕೆಲ ಕಾರಣಗಳಿಂದ ಫೈಟರ್ ರವಿಗೆ ಟಿಕೇಟ್ ಸಿಗದ ಕಾರಣ, ರವಿ ಪಕ್ಷ ತೊರೆದಿದ್ದಾರೆ....
ಹಾಸನ: ಹೊಳೆನರಸಿಪುರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಾಲೂಕು ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದ ಶ್ರೇಯಸ್‌ಗೆ ತಾಯಿ ಅನುಪಮಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇ.ಹೆಚ್ ಲಕ್ಷ್ಮಣ್ , ಮುಖಂಡ ಪುಟ್ಟರಾಜ್, ಲಕ್ಷ್ಮಣ್ ಸಾಥ್ ನೀಡಿದ್ದಾರೆ. ಸಹಸ್ರಾರು ಕಾರ್ಯಕರ್ತರೊಂದಿಗೆ ರ್ಯಾಲಿಯಲ್ಲಿ ಬಂದ ಶ್ರೇಯಸ್, ಮಾಜಿ ಸಚಿವ ದಿ.ಪುಟ್ಟಸ್ವಾಮಿ ಗೌಡರ ಮೊಮ್ಮಗನಾಗಿದ್ದು, ದೇವೇಗೌಡರ ಎದುರಾಳಿಯಾಗಿದ್ದ.
ನಾಮಪತ್ರ...
ಹಾಸನ: ಹಾಸನದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೌಡ, ಇಂದು ಚುನಾವಣಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೆರವಣಿಗೆ ಮೂಲಕ, ತಮ್ಮ ಕಾರ್ಯಕರ್ತರೊಂದಿಗೆ ಕಚೇರಿಗೆ ಬಂದ ಸ್ವರೂಪ್ ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಸ್ವರೂಪ್, ನಮ್ಮ ನಾಯಕರಾದಂಥ ದೇವೇಗೌಡರು, ಕುಮಾರಣ್ಣನವರು, ರೇವಣ್ಣನವರು, ಪ್ರಜ್ವಲ್, ಸೂರಜ್, ಭವಾನಿ ಮೇಡಂ ಆಶೀರ್ವಾದದೊಂದಿಗೆ ನಾನು ಇಂದು ನಾಮಪತ್ರ ಸಲ್ಲಿಸಿದ್ದೇನೆ....