ಪಶ್ಚಿಮ ಬಂಗಾಳ: ಪಕ್ಷದ ಬಾವುಟ ತೆರವುಗೊಳಿಸೋ ವಿಚಾರವಾಗಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನಝತ್ ನಲ್ಲಿ ಚುನಾವಣೆ ವೇಳೆ ಹಾಕಲಾಗಿದ್ದ ಬಿಜೆಪಿ ಬಾವುಟಗಳನ್ನು ತೆಗೆದು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಶುರುವಾಗಿದೆ. ಬಿಜೆಪಿ-ಟಿಎಂಸಿ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕಿಳಿದು ಪರಿಸ್ಥಿತಿ...
ನೆಲಮಂಗಲ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವರಾಗಿರೋ ಸದಾನಂದಗೌಡ ಮಾರಮ್ಮ ದೇವಿಗೆ 11 ರೂಪಾಯಿ ಹರಕೆ ತೀರಿಸಿದ್ದಾರೆ.
ಬೆಂಗಳೂರು ಹೊರವಲಯದ ತಾವರೆಕೆರೆಯ ಮಾರಮ್ಮ ದೇಗುಲಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ದೇವಿಗೆ ಕಟ್ಟಿಕೊಂಡಿದ್ದ ಹರಕೆ ತೀರಿಸಿದ್ರು. ತಾವು ಗೆದ್ದರೆ 11 ರೂಪಾಯಿ ಕಾಣಿಕೆ ನೀಡೋದಾಗಿ ಹರಕೆ ಮಾಡಿಕೊಂಡು ವಿಶೇಷ...
ತ್ರಿಪುರಾ: 2047ರ ಸ್ವಾತಂತ್ರ್ಯ ಶತಮಾನೋತ್ಸವದವರೆಗೂ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಭವಿಷ್ಯ ನುಡಿದಿದ್ದಾರೆ.
ತ್ರಿಪುರಾದಲ್ಲಿ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಸ್ವತಂತ್ರ್ಯ ಬಂದ ನಂತರದಲ್ಲಿ , ಅಂದರೆ
1950ಯಿಂದ 1977 ವರೆಗೂ ದೇಶದಲ್ಲಿ ಬಹುಕಾಲ ಆಡಳಿತ ನಡೆಸಿದ ದಾಖಲೆ ಕಾಂಗ್ರೆಸ್ ಪಕ್ಷದ್ದು....
ಬೆಂಗಳೂರು: ಸಂಸದೆ ಸುಮಲತಾ ಇವತ್ತು ದಿಢೀರನೆ ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಕ್ಕೆ ಧನ್ಯವಾದ ಹೇಳಲು ಸುಮಲತಾ ಬಂದಿದ್ದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಸದೆ ಸುಮಲತಾ ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಬಿಜೆಪಿ...
ಬೆಂಗಳೂರು: ಕೇಂದ್ರ ಗೃಹ ಖಾತೆ ಸಚಿವರಾಗಿ ಅಮಿತ್ ಶಾ ಅಧಿಕಾರ ಸ್ವೀಕರಸಿದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಅಮಿತ್ ಶಾ ಗೆ ಗೃಹ ಖಾತೆ ನೀಡಲಾಗಿದೆ. ಹೀಗಾಗಿ ಗೃಹ ಇಲಾಖೆ ಅನ್ನೋ ಬದಲು ಅದನ್ನು ಕ್ಲೀನ್
ಚಿಟ್ ಇಲಾಖೆ ಅಂತ ಹೆಸರಿಡಬೇಕು ಅಂತ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ
ಟ್ವೀಟ್ ಮಾಡೋ ಮೂಲಕ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ...
ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ
ಆಯನೂರು ಮಂಜುನಾಥ್ ಮೈತ್ರಿ ನಾಯಕರನ್ನು ಟೀಕಿಸಿದ್ದಾರೆ. ಏನೇ ಮಾಡಿದ್ರೂ ಬಿಜೆಪಿ ಅಭ್ಯರ್ಥಿಯನ್ನು
ಸೋಲಿಸೋದಕ್ಕೆ ಆಗಲಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರದಲ್ಲಿ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡಿದ್ರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರನ್ನು ಸೋಲಿಸೋದಕ್ಕೆ ಮೈತ್ರಿ ಕೂಟದ ನಾಯಕರೆಲ್ಲರೂ ಶಿವಮೊಗ್ಗಕ್ಕೆ ಬಂದಿದ್ರು. ಸಚಿವ...
ಬೆಂಗಳೂರು: ಎಕ್ಸಿಟ್ ಪೋಲ್ ರಿಪೋರ್ಟ್ ಬಂದಾಗಿನಿಂದ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ನಾಯಕರು ಫಲಿತಾಂಶ ಬಂದ ಮೇಲೆ ಸುಮ್ಮನಾಗಿದ್ರು. ಆದ್ರೆ
ಇದೀಗ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ಬಳಿಕ ಮತ್ತೆ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿರೋ ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಇವಿಎಂ, ವಿವಿ ಪ್ಯಾಟ್ ಹೊಂದಾಣಿಕೆಯಲ್ಲಿ ವ್ಯತ್ಯಾಸವಿದೆ. ಎರಡೂ...
ನವದೆಹಲಿ: 2ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದು ಪ್ರಮಾಣವಚನ ಸ್ವೀಕರಿಸಿದ್ರು. ನವದೆಹಲಿಯ ರಾಷ್ಟ್ರಪತಿ ಭವನದೆದುರಿನ ಫೋರ್ ಕೋರ್ಟ್ ನಲ್ಲಿ ಸಜ್ಜಾಗಿದ್ದ ಬೃಹತ್ ವೇದಿಕೆಯಲ್ಲಿ ಮೋದಿ ಸೇರಿದಂತೆ 58 ಮಂದಿ ಕೇಂದ್ರ ಸಚಿವರು ಪ್ರಮಾಣವಚನ ಸ್ವೀಕರಿಸಿದ್ರು.
ಇವತ್ತು ನವದೆಹಲಿಯ ರಾಷ್ಟ್ರಪತಿ ಭವನದೆದುರು ಹಬ್ಬದ ಸಂಭ್ರಮ. ಎಲ್ಲೆಡೆ ಮೋದಿ ಮೋದಿ ಎಂಬ ಕೂಗು ಕವಿಗಡಚಿಕ್ಕುತ್ತಿತ್ತು. ಸರಿಯಾಗಿ...
ನವದೆಹಲಿ: ನರೇಂದ್ರ ಮೋದಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ. ಇದರ ಜೊತೆಗೆ ಕೇಂದ್ರ ಸಂಪುಟಕ್ಕೆ ಸಚಿವರನ್ನೂ ಆಯ್ಕೆ ಮಾಡಲಾಗಿದ್ದು, ರಾಜ್ಯದ 4 ಮಂತಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಘಟಾನುಘಟಿಗಳಿಗೆ ಈ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಬಿಜೆಪಿ ಸ್ಥಾನ ನೀಡಿದೆ. ಕಳೆದ ಬಾರಿ ಸಚಿವ ಸಂಪುಟದಲ್ಲಿದ್ದ ಶೇ.70 ರಷ್ಚು ಮಂದಿಗೆ ಈ ಬಾರಿಯೂ...
ಬೆಳಗಾವಿ: ಅತ್ತ ರಾಜ್ಯ ಮೈತ್ರಿ ಸರ್ಕಾರ ಉಳಿಸಿಕೊಳ್ಳೋ ನಿಟ್ಟಿನಲ್ಲಿ ಸಂಪುಟ ಪುನಾರಚನೆ, ವಿಸ್ತರಣೆ ಕಸರತ್ತು ನಡೀತಿದ್ರೆ, ಇತ್ತ ಜೆಡಿಎಸ್ ನ ಸಚಿವ ಜಿ.ಟಿ ದೇವೇಗೌಡ ಬಿಜೆಪಿ ಸೇರ್ಪಡೆಯಾಗುವ ಅನುಮಾನ ಮೂಡಿಸಿದ್ದಾರೆ.
ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸದಲ್ಲಿ ಮಾತನಾಡುತ್ತಿದ್ದ ಸಚಿವ ಜಿ.ಟಿ ದೇವೇಗೌಡ ಎಂದೂ ಇಲ್ಲದೆ ಇವತ್ತು ಮೋದಿಯವರನ್ನ ಕೊಂಡಾಡಿದ್ದಾರೆ. ಪ್ರಧಾನಮಂತ್ರಿ...