ಬೆಂಗಳೂರು: ನಿವೃತ್ತ ಮುಖ್ಯ ಕಾರ್ಯದರ್ಶಿ, ಮಾಜಿ ಸಚಿವ ಡಾ.ಜೆ.ಅಲೆಕ್ಸಾಂಡರ್ (83) ಶುಕ್ರವಾರ ನಗರದಲ್ಲಿ ನಿಧನರಾದರು.
ನಗರದಲ್ಲಿಯೇ ಶನಿವಾರ (ಜ.15) ಅಂತ್ಯಕ್ರಿಯೆ ನಡೆಯಲಿದೆ. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಅಲೆಕ್ಸಾಂಡರ್, ಅಂದಿನ ಭಾರತೀನಗರ ಕ್ಷೇತ್ರದ ಶಾಸಕರಾಗಿದ್ದರು. ಮುಖ್ಯ ಕಾರ್ಯದರ್ಶಿಯಾಗುವ ಮೊದಲು ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಏಕೈಕ ಅಧಿಕಾರಿ ಎಂಬ ಶ್ರೇಯ ಅವರದ್ದಾಗಿತ್ತು. ಅನಾರೋಗ್ಯದಿಂದಾಗಿ ಕೆಲ...