ಕೋಲಾರ: ಬಿಜೆಪಿಯಿಂದ ಟಿಕೇಟ್ ಸಿಗದ ಕಾರಣಕ್ಕೆ, ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದ ಹೂಡಿ ವಿಜಯ್‌ಕುಮಾರ್ ಮುನ್ನಡೆ ಸಾಧಿಸಿದ್ದು, ಗೆಲ್ಲುವ ಸಾಧ್ಯತೆ ಹೆಚ್ಚಿದೆ.
ಈ ಕಾರಣಕ್ಕೆ ಕಾಂಗ್ರೆಸ್ ಈಗಾಗಲೇ ವಿಜಯ್ ಕುಮಾರ್ ಸಂಪರ್ಕ ಮಾಡಿದ್ದು, ತಮಗೆ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ. ಈ ಮೂಲಕ ಕೋಲಾರದಲ್ಲಿ ಕಾಂಗ್ರೆಸ್ಸಿಗರು, ಆಪರೇಷನ್ ಕಾಂಗ್ರೆಸ್‌್ಗೆ ಯತ್ನಿಸಿದ್ದಾರೆ.
ಸದ್ಯ ವಿಜಯ್ ಕುಮಾರ್, ಮಾಲೂರು ವಿಧಾನಸಭಾ ಕ್ಷೇತ್ರದ...
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಮತ ಎಣಿಕೆ ನಡೆಯುತ್ತಿದೆ ಅಷ್ಟೇ. ಈಗಲೇ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದ, ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತಿದೆ.
ಢೋಲು ಬಾರಿಸಿ, ಬಣ್ಣ ಬಳಿದುಕೊಂಡು, ಸಿಹಿ ಹಂಚಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಮತ ಎಣಿಕೆಯ ವೇಳೆ ಕಾಂಗ್ರೆಸ್‌ನ ಹೆಚ್ಚಿನ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು,...
ಕೋಲಾರ : ಕೋಲಾರದಲ್ಲಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಎಣಿಕೆ ಆರಂಭವಾಗಿದ್ದು, ವರ್ತೂರು ಪ್ರಕಾಶ್ ಮುನ್ನಡೆ ಸಾಧಿಸಿದ್ದಾರೆ. ಕೆಜಿಎಫ್ ವಿಧನಾನಸಭಾ ಕ್ಷೇತ್ರ ಅಂಚೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೂಪಕಲಾ ಶಶಿಧರ್ ಮುನ್ನಡೆ ಸಾಧಿಸಿದ್ದಾರೆ.
ಬಂಗಾರಪೇಟೆ ಅಂಚೆ ಮತ ಎಣಿಕೆಯಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದ್ದು, ಬಂಗಾರಪೇಟೆ ವಿಧಾಸಭಾ ಕ್ಷೇತ್ರದ ಮಲ್ಲೇಶ್ ಬಾಬು ಮುನ್ನಡೆಯಲ್ಲಿದ್ದಾರೆ. ಮುಳಬಾಗಿಲು ಅಂಚೆ...
ಹಾಸನ : ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಮತ್ತು ಸ್ವರೂಪ್ ಗೌಡ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮತಎಣಿಕೆ ಆರಂಭವಾಗಿದೆ. ಮತಎಣಿಕೆಗೆ ಸುಮಾರು 600 ಸಿಬ್ಬಂದಿಗಳನ್ನ ನಿಯೋಜನೆ ಮಾಡಿದ್ದು, ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತಎಣಿಕೆ ಕೇಂದ್ರದ ಒಳಗಡೆ ಹಾಗೂ ಮತಕೇಂದ್ರದ ಹೊರಗಡೆ ಸುಮಾರು 750 ಕ್ಕೂ ಹೆಚ್ಚು...
ಮಂಡ್ಯ: ಇಂದು ವಿಧಾನ ಸಭಾ ಚುನಾವಣಾ ಮತ ಎಣಿಕೆ ಆರಂಭವಾಗಿದ್ದು, ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.
ಮಂಡ್ಯ ವಿವಿಯ ಕಟ್ಟಡದಲ್ಲೂ ಮತ ಎಣಿಕೆ ಆರಂಭವಾಗಿದ್ದು, ಮಳವಳ್ಳಿ 20 ಸುತ್ತು, ಉಳಿದ ಕ್ಷೇತ್ರದ್ದು 19 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಈಗ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ನಡೆದಿದ್ದು, ಪ್ರತೀ ಕ್ಷೇತ್ರಕ್ಕೆ ಎರಡು...
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಂಚರತ್ನ ಯಾತ್ರೆ ಮೂಲಕ, ರಾಜ್ಯ ಸುತ್ತಿದ ಮಾಜಿ ಸಿಎಂ ಕುಮಾರಸ್ವಾಮಿ, ಚುನಾವಣೆ ಮುಗಿದ ಬಳಿಕ, ಸ್ನೇಹಿತರು, ಕಾರ್ಯಕರ್ತರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದಾರೆ. ಜೆಡಿಎಸ್ ಕಾರ್ಯಕರ್ತರೊಬ್ಬರು ಈ ಫೋಟೋವನ್ನ ಶೇರ್ ಮಾಡಿದ್ದಾರೆ.
ಸದ್ಯ ಸಿಂಗಾಪುರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹೆಚ್ಡಿಕೆ, ಕರ್ನಾಟಕದಲ್ಲಿರುವ ಜೆಡಿಎಸ್ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿದ್ದಾರೆ. ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ...
ಹಾಸನ: ರಾಜ್ಯದ ಹೈವೋಲ್ಟೇಟ್ ಕ್ಷೇತ್ರ ಹಾಸನದಲ್ಲೂ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಕಾರ್ಯಕರ್ತರು ಸ್ವರೂಪ್ v/s ಪ್ರೀತಂಗೌಡ ಗೆಲುವಿನ ಬಗ್ಗೆ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಹಾಸನದಲ್ಲಿ ಸ್ವರೂಪ್ ಮತ್ತು ಪ್ರೀತಂ ನಡುವೆ ಫುಲ್ ಫೈಟ್ ಇದ್ದು, ತಮ್ಮ ನಾಯಕ ಗೆಲ್ತಾರೆ ಎಂದು ಬೆಂಬಲಿಗರು ಬೆಟ್ಟಿಂಗ್ ಕಟ್ಟಿದ್ದಾರೆ. ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಹಾಸನದಲ್ಲಿ, ಈ ಬಾರಿ ಮತಗಳಿಕೆ, ಲೀಡ್, ಗೆಲುವು...
ಹಾಸನ: ಭಾರೀ ಕುತುಹಲ ಕೆರಳಿಸಿರುವ ಏಳು ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶಕ್ಕಾಗಿ ಜನತೆ ಕಾಯುತ್ತಿದ್ದು, ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಮತ ಏಣಿಕೆಯನ್ನು ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದರು.
ನಗರದ ಡೈರಿ ವೃತ್ತ, ರಿಂಗ್ ರಸ್ತೆ ಬಳಿ ಇರುವ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವಣದಲ್ಲಿ...
ಹಾಸನ: ಈಗಾಗಲೇ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದು ಎಲ್ಲಾ ಮಂತಯಂತ್ರಗಳು ಹಾಸನ ನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಸ್ಟ್ರಾಂಗ್ ರೂಮ್ ನಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಡಲಾಗಿದ್ದು, ಮೇ.13ರ ರಂದು ನಡೆಯುವ ಮತ ಏಣಿಕೆ ಕಡೆ ಮತದಾರರು ಲೆಕ್ಕಚಾರದಲ್ಲಿ ತೊಡಗಿದ್ದಾರೆ.
ಶನಿವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುವ ಮತ ಏಣಿಕೆಗೆ ಸಕಲ...
ಬೆಂಗಳೂರು: ನಿನ್ನೆ ತಾನೇ ಎಲೆಕ್ಷನ್ ಮುಗಿದಿದೆ. ಮೊನ್ನೆ ತನಕ ಆಯಾ ಪಕ್ಷದ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದರು. ಹಲವೆಡೆ ತೆರಳಿ ಪ್ರಚಾರವನ್ನೂ ಮಾಡಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ ಕಾರ್ಯಕರ್ತರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ನನ್ನದೊಂದು ವಿಶೇಷ ಮನವಿ:...