ಹಾಸನ: ಸ್ವರೂಪ್ ನನ್ನ ಮಗ ಎಂಬ ಭವಾನಿ ರೇವಣ್ಣ ಹೇಳಿಕೆ ವಿಚಾರಕ್ಕೆ ಹಾಸನದಲ್ಲಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಅವರ ಪ್ರೀತಿ ಸ್ವರೂಪ್ ಅವರ ಮೇಲಿದೆ ಅದು ಗೊತ್ತಾಗಿದೆ. ಅವರಿಬ್ಬರೂ ಪರಸ್ಪರ ಯಾವುದೇ ರೀತಿಯ ಮಾತನಾಡಿಕೊಳ್ಳದೇ, ನಮ್ಮ ಹಾಸನದ ಪಾಸಿಟಿವ್ ಎನರ್ಜಿ ಇದೆ, ಅಭಿರುಚಿ ಇದೆ ಅದನ್ನ ಹೋಗೋದಕ್ಕೆ ಬಿಡದೇ, ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿರೋದು ಉತ್ತಮವಾದ...
ಇಂದು 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಗಾಗಿ ತಯಾರಾಗಲು ಎಲ್ಲರನ್ನೂ ಹುರಿದುಂಬಿಸಿದ್ದಾರೆ. ಅವರೇನೇನು ಮಾತನಾಡಿದರು ಎಂಬುದನ್ನು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
"ಡಬಲ್ ಇಂಜಿನ್ ಎಂದರೇ ಡಬಲ್ ಅಭಿವೃದ್ಧಿ ಎಂದರ್ಥ. ಕರ್ನಾಟಕಕ್ಕೆ ಡಬಲ್ ಇಂಜಿನ್ ಸರ್ಕಾರದಿಂದ ಬಹುಪಾಲು ಲಾಭವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದ ಅಭಿವೃದ್ಧಿ ವೇಗವಾಗಿ...
ಮಹದೇವಪುರ:- ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಪರ ತ್ರಿಪುರ ಮಾಜಿ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ಮತ ಪ್ರಚಾರ ನಡೆಸಿದರು.
ಮಹದೇವಪುರ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರಾಗಿ ಆಗಮಿಸಿರುವ ಅವರು ದೊಡ್ಡನೆಕ್ಕುಂದಿ ವಾಡ್೯ ಸೇರಿದಂತೆ ಕ್ಷೇತ್ರದ ಹಲವೆಡೆ ಬಿಜೆಪಿ ಅಭ್ಯರ್ಥಿ ಮಂಜುಳಾ ಲಿಂಬಾವಳಿ ಪರ ಅಬ್ಬರದ ಪ್ರಚಾರ ನಡೆಸಿದರು, ಕ್ಷೇತ್ರದಲ್ಲಿ ಬಿಜೆಪಿ ಪರವಾದ...
ಉತ್ತರಪ್ರದೇಶ: ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ಗೆ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನ ಪ್ರೀತಿಗೆ ಹುಡುಗಿಯ ತಂದೆ ಒಪ್ಪದಿದ್ದ ಕಾರಣಕ್ಕೆ, ಅಪ್ರಾಪ್ತನೋರ್ವ ಈ ಕೃತ್ಯವೆಸಗಿದ್ದಾನೆಂದು ತಿಳಿದು ಬಂದಿದೆ.
ಎಮರ್ಜೆನ್ಸಿ ನಂಬರ್ ಆಗಿರುವ 112ಗೆ ಕರೆ ಮಾಡಿದ ಅಪ್ರಾಪ್ತ, ಯೋಗಿ ಆದಿತ್ಯನಾಥ್‌ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಈ ಸಂದೇಶ ಬಂದ ಬಳಿಕ ಎಚ್ಚೆತ್ತ ಪೊಲೀಸರು, ಈ...
ಬೆಳಗಾವಿ: ರಾಜಕೀಯ ಅಂದ್ರೆ ವಾಗ್ದಾಳಿ, ಆರೋಪ- ಪ್ರತ್ಯಾರೋಪಗಳಿರೋದು ಸಹಜ. ಆದ್ರೆ ಎದುರಿಗೆ ಬಂದಾಗ, ಸ್ನೇಹಿತರಂತೆ ನಡೆದುಕೊಳ್ಳೋದು ಸಹಜ ಧರ್ಮ. ಅದೇ ರೀತಿ ಬೆಳಗಾವಿ ಏರ್ಪೋರ್ಟ್‌ನಲ್ಲಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಾಲಿ ಸಿಎಂ ಬೊಮ್ಮಾಯಿ, ಕೈ ಕುಲುಕಿ ಕುಶಲೋಪರಿ ವಿಚಾರಿಸಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ಟ್ವೀಟರ್‌ನಲ್ಲೂ ಸದ್ದು ಮಾಡುತ್ತಿದೆ.
https://twitter.com/AshwiniMS_TNIE/status/1651115286748344321
ಹಾಸನ: ಹಾಸನದಲ್ಲಿ ಸ್ವರೂಪ್ ಪರ ಭವಾನಿ ರೇವಣ್ಣ ಭರ್ಜರಿ ಪ್ರಚಾರ ನಡೆಸಿದ್ದಾರೆ. ಹಾಸನ ನೀಲುವಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟ ಭವಾನಿ ರೇವಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ, ವಿಶೇಷ ಪೂಜೆ ಸಲ್ಲಿಸಿದರು.
ನಂತರ ಪ್ರಚಾರ ಕೈಗೊಂಡ ಭವಾನಿ ರೇವಣ್ಣ, ನಾವೆಲ್ಲಾ ದೇವೇಗೌಡರ ಹುಟ್ಟುಹಬ್ಬಕ್ಕೆ ಗೆಲುವನ್ನ ಅವರ ಪಾದಕ್ಕೆ ಅರ್ಪಿಸಬೇಕೆಂದು ಹೇಳುತ್ತ ಕಾರ್ಯಕರ್ತರನ್ನ ಹುರಿದುಂಬಿಸಿ...
ಹುಬ್ಬಳ್ಳಿ: ಹಳೇ ಮೈಸೂರಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರವಾಗಲಿದೆ, ಕಾಂಗ್ರೆಸ್ ಸ್ಥಾನಗಳು ಕುಸಿಯಲಿದೆ. ಅಲ್ಲದೇ ಬಿಜೆಪಿ ಬಹುಮತ ಪಡೆದು ರಾಜ್ಯದಲ್ಲಿ ಮತ್ತೆ ಆಡಳಿತ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ ಭದ್ರಕೋಟೆಯಾಗಿರುವ ಹಳೆ ಮೈಸೂರಲ್ಲಿ ಹೆಚ್ಚು...
ಮಂಡ್ಯ: ಮೋದಿಜಿ ಅವರ ಟೀಂ ಇಂಡಿಯದಲ್ಲಿ ಕರ್ನಾಟಕದ ಗರಿಷ್ಠ ಆಟಗಾರರು ಇರುವಂತೆ ನೋಡಿಕೊಳ್ಳಿ; ಇದಕ್ಕಾಗಿ ಇಲ್ಲಿನ ಅಭ್ಯರ್ಥಿಗಳನ್ನು ನೀವೆಲ್ಲರೂ ಗೆಲ್ಲಿಸಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಸ್ಥಾಪಿಸಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮನವಿ ಮಾಡಿದರು.
ಮಂಡ್ಯದಲ್ಲಿ ಇಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಠ ಇಲ್ಲಿದೆ. ಭೈರೇಶ್ವರ ಸ್ವಾಮಿ...
ಮಂಡ್ಯ: ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅಬ್ಬರದ ಭಾಷಣ ಮಾಡಿದ್ದು, ಯೋಗಿ ಆದಿತ್ಯನಾಥ್‌ಗೆ ಅದ್ಧೂರಿ ಸ್ವಾಗತ ಮಾಡಿದ್ದಾರೆ.
ಉತ್ತರ ಪ್ರದೇಶ ಒಂದು ಕಾಲದಲ್ಲಿ ಗೂಂಡಾ ರಾಜ್ಯವಾಗಿತ್ತು. ಜನಸಾಮಾನ್ಯರು ಓಡಾಡಲು ಆಗ್ತಿರಲಿಲ್ಲ. ರೌಡಿಗಳಿಗೆ ಮಾಮೂಲು ಕೊಟ್ಟು ಕೊಟ್ಟು ಸಾಕಾಗಿದ್ದರು. ಯೋಗಿಜೀ ಅಧಿಕಾರಕ್ಕೆ ಬಂದ ನಂತರ ರೌಡಿಗಳು ಭಯದಿಂದ ಓಡೋಗುವ ವಾತಾವರಣ ಇದೆ. ಜನಸಾಮಾನ್ಯರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ....
ಸಾಮಾನ್ಯವಾಗಿ ಸಿನಿಮಾ ನಟ ನಟಿಯರ ದಿನಚರಿ ಹೇಗಿರತ್ತೆ ಅಂತಾ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇರತ್ತೆ. ಅದೇ ರೀತಿ ರಾಜಕಾರಣಿಗಳ ದಿನಚರಿ ಕೂಡ ವಿಭಿನ್ನವಾಗಿರತ್ತೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 91.1 ಎಫ್‌ಎಂ ಜೊತೆ ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಹೇಳಿದ್ದಾರೆ.
ನೀವು ಎಷ್ಟು ಗಂಟೆಗೆ ಏಳ್ತೀರಿ, ನಿಮ್ಮ ದಿನಚರಿ ಹೇಗಿರತ್ತೆ ಅಂತಾ ಕೇಳಿದಾಗ, ಅದಕ್ಕೆ...