ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಉಂಟಾಗಿರೋ ಅಲ್ಲೋಲ ಕಲ್ಲೋಲದಿಂದಾಗಿ ಕಂಗೆಟ್ಟಿರುವ ದೋಸ್ತಿಗಳು ಇದೀಗ ಮತ್ತೊಂದು ಪ್ಲ್ಯಾನ್ ಮಾಡಿದ್ದಾರೆ. ಶಾಸಕರು ಹಾಗೂ ಸಚಿವರಿಗೆ ಉಪಹಾರ ಕೂಟ ಏರ್ಪಡಿಸಿರೋ ಕೈ ನಾಯಕರು ಭುಗಿಲೆದ್ದಿರೋ ಭಿನ್ನಮತಕ್ಕೆ ಫುಲ್ ಸ್ಟಾಪ್ ಹಾಕೋದಕ್ಕೆ ಶತಪ್ರಯತ್ನ ಮಾಡ್ತಿದ್ದಾರೆ.
ಹಾಲಿ ಸಚಿವರ ತಲೆದಂಡ ಮಾಡಿ ಅತೃಪ್ತ ಶಾಸಕರಿಗೆ ಮಂತ್ರಿಗಿರಿ ನೀಡೋ ಮೂಲಕ ಬಂಡಾಯ ಶಮನ ಮಾಡುವ ಹಾದಿಹಿಡಿದಿದ್ದಾರೆ...