ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಮಠಾಕೇರಿ ಕ್ರಾಸ್ ಪ್ರದೇಶದ ನಾಲ್ಕೈದು ಬಾವಿಗಳಲ್ಲಿ ಡಿಸೇಲ್ ಯುಕ್ತ ನೀರು ಕಾಣಿಸಿದ್ದರಿಂದ ಸ್ಥಳೀಯ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಕುಡಿಯುವ ನೀರಿನ ಬಾವಿಯಲ್ಲಿ ಡಿಸೇಲ್ ವಾಸೆನೆಯುಳ್ಳ ನೀರು ಬರುತ್ತಿದೆ. ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದು, ಪುರಸಭೆಯ ಅಧಿಕಾರಿಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನು ಪುರಸಭೆಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ....