ಬೆಂಗಳೂರು : ನಗರದಲ್ಲಿ ಕಳ್ಳರ ಕಾಟ ದಿನೇ ದಿನೇ ಜಾಸ್ತಿಯಾಗ್ತಿರೋದು ಎಲ್ಲಾರಿಗೂ ಗೊತ್ತಿರುವ ವಿಷಯ ಆದರೆ ಪೋಲಿಸರೇ ಕಳ್ಳತನಕ್ಕೆ ಇಳಿದಿರುವ ವಿಷಯ ನಿಮಗೆ ಗೊತ್ತಿದೆಯಾ ಕೇಳುವುದಕ್ಕೆ ಕಹಿಯಾದರೂ ಇದೇ ಸತ್ಯ. ಹೌದು ಕಾನ್ಸ್ಟೇಬಲ್ ಯಲ್ಲಪ್ಪ ಎನ್ನುವ ಪೇದೆ ಬರೋಬ್ಬರಿ ಮೂರು ಮನೆಗಳಲ್ಲಿ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ.
ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಪೇದೆ...
ಚಿತ್ರದುರ್ಗ : ಪಂಚಾಯಿತಿಗೊಂದು ಬಾರ್, ಪಂಚೆಗೊಂದು ಕ್ವಾಟರ್ ಕೊಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೆ ತಿಂಗಳಲ್ಲಿ ದಿವಾಳಿಯತ್ತ ಸಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ದ ರಾಜ್ಯಾದ್ಯಂತ ಬಿಜೆಪಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಧರಣಿಯ ಹಿನ್ನೆಲೆಯಲ್ಲಿ ಒನಕೆ ಓಬವ್ವ ವೃತ್ತದಲ್ಲಿ ನಡೆದ...
ಧಾರವಾಡ: ನಗರದ ಹೊರವಲಯದ ಹಳಿಯಾಳ ಬೈಪಾನ್ ರಸ್ತೆಯಲ್ಲಿ ಎಲೆಕ್ಟ್ರಿಕ್ ಬಿಲ್ ಕಲೆಕ್ಟರ್ ನ ಬರ್ಬರ ಹತ್ಯೆಯಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ರಜಾಕ್ ಎಂದು ಗುರುತಿಸಲಾಗಿದ್ದು ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಹಳಿಯಾಳ್ ಬೈಪಾಸ್ ರಸ್ತೆಯಲ್ಲಿ ಬೈಕ್ ಮೇಲೆ ಬಂದಿದ್ದ ಯುವಕರು ರಜಾಕ್ ಕವಲಗೇರಿ ಎಂಬ ಬಿಲ್ ಕಲೆಕ್ಟರ್ ನ್ನನು ಮಾರಕಾಸ್ತ್ರಗಳಿಂದ ಹಲ್ಲೆ ಕೊಚ್ಚಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ....
ಧಾರವಾಡ: ಬೆಂಗಳೂರಿನ ಅತ್ತಿಬೆಲೆ ಪಟಾಕಿ ದುರಂತದಿಂದಾಗಿ ಇಡಿ ರಾಜ್ಯವೇ ಬೆಚ್ಚಿಬಿದ್ದಿದ್ದು ಇದೀಗ ಈ ದುರಂತದ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಧಾರವಾಡದಲ್ಲಿ ತಡರಾತ್ರಿ ವಿವಿಧ ಪಟಾಕಿ ಉಗ್ರಾಣಗಳ ಮೇಲೆ ದಿಢೀರ್ ದಾಳಿ ನಡೆಸಿದೆ.
ಸವದತ್ತಿ ರಸ್ತೆ, ಸಪ್ತಾಪುರ, ಮದಿಹಾಳ, ಕೆಲಗೇರಿ ರಸ್ತೆಗಳಲ್ಲಿನ ಉಗ್ರಾಣಗಳಲ್ಲಿ ಪರಿಶೀಲನೆ ನಡೆಸಿದೆ. ತಹಸೀಲ್ದಾರ ದೊಡ್ಡಪ್ಪ ಹೂಗಾರ, ಎಸಿಪಿ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ...
ರಾಜ್ಯ ಸುದ್ದಿ: ದಿನಬಳಕೆ ವಸ್ತುಗಳ ಜೊತೆಗೆ ತರಕಾರಿಗಳ ಬೆಲೆ ಏರಿಕೆ ಸಾಮಾನ್ಯವಾಗಿದೆ ಇಷ್ಟುದಿನ ಕೆಂಪು ಸುಂದರಿ ಎಂದೆ ಬಿರುದು ಪಡೆದಿದ್ದ ಟೊಮಾಟೋ ಬೆಲೆ ಗಗನಕ್ಕೆ ಏರಿ ನಂತರ ಪಾತಾಳಕ್ಕೆ ಇಳಿದದ್ದೂ ಆಗಿದೆ. ಆದರೆ ಈಗ ಉಳ್ಳಾಗಡ್ಡೆ ಬೆಲೆ ದಿನದಿಂದ ದಿನಕ್ಕೆ ರಾಕೇಟ್ ವೇಗದಲ್ಲಿ ಏರಿಕೆಯಾಗುತ್ತಿದೆ. ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ...
ರಾಜ್ಯ ಸುದ್ದಿ; ಅಕ್ಟೋಬರ್ ತಿಂಗಳು ಚಳಿಗಾಲದಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಶೇ 10 ರಷ್ಟು ಏರಿಕೆಯಾಗಲಿದ್ದು ರೈತರು ಬೆಳೆದ ಬೆಳೆಯ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ.
ರಾಜ್ಯದ ಕೆಲವು ಭಾಗಗಳನ್ನು ಹೊರತುಪಡಿಸಿ ಕರ್ನಾಟಕದ ಬಹುತೇಕ ಭಾಗಗಳು ಈ ತಿಂಗಳಲ್ಲಿ ಹೆಚ್ಚಿನ ತಾಪಮಾನ ಇರಲಿದೆ ಇದರಿಂದಾಗಿ ಅಗತ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸಲಿದ್ದಾರೆ....
ರಾಜ್ಯ ಸುದ್ದಿ: ತಮಿಳುನಾಡಿನ ರೈತರಿಗೆ ಕಾವೇರಿ ನದಿಯಿಂದ ನೀರು ಬಿಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದಾಗಿನಿಂದ ಇಲ್ಲಿಯವರೆಗೂ ಕಾವೇರಿ ವಿಚಾರವಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಸಾಕಷ್ಟು ಪ್ರತಿಭಟನೆಗಳನ್ನು ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಫಲ ಸಿಕ್ಕಿಲ್ಲ. ಇದರ ನಡುವೆ ಮತ್ತೆ ಕೋರ್ಟ್ ಆದೇಶ ಹೊರಡಿಸಿದೆ.
ದಿನಕ್ಕೆ 3000 ಕ್ಯೂಸೆಕ್ ನಂತೆ 15 ದಿನಗಳ ಕಾಲ ತಮಿಳುನಾಡಿಗೆ...
ಧಾರವಾಡ: ಕಳೆದ ನಾಲ್ಕು ವರ್ಷಗಳಿಂದ ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಈ ಸಮುದಾಯದವರಿಗೆ ಮೀಸಲಾತಿ ಜಾರಿಯಾಗಿಲ್ಲ. ಕಳೆದ ಬಿಜೆಪಿ ಸರ್ಕಾರದಲ್ಲಿಯೂ ಸಹ ಸಾಕಷ್ಟು ದಿನಗಳ ಕಾಲ ಅನಿರ್ದಿಷ್ಟ ಧರಣಿ ಕೈಗೊಂಡರು ಯಾವುದೇ ಪ್ರತಿಫಲ ದೊರೆತಿಲ್ಲ ಹಾಗಾಗಿ ಮತ್ತೊಮ್ಮೆ ಧರಣಿ ಕೈಗೊಳ್ಳಲು ಮುಂದಾಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿಯಾದರೂ ನಮ್ಮ...
ಹುಬ್ಬಳ್ಳಿ: ಕೈಗೆ ಬಂದ ಅಡಿಕೆ ಬೆಳೆಯನ್ನು ಕಳ್ಳತನ ಮಾಡಿಕೊಂಡು ಹೋದಾಗ ಪೊಲೀಸರಿಗೆ ದೂರು ನೀಡಿದಾಗಲೂ ಪೊಲೀಸರು ನ್ಯಾಯ ದೊರಕಿಸಿ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲವಾಗಿದೆ. ಸಾಲ ಮಾಡಿ ಬೆಳೆದ ಬೆಳೆಯನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ ಎಂದು ರೈತರು ಕಣ್ಣೀರಿನ ಕಥೆಯನ್ನು ಹೇಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೆರೆಗಾಳ ಗ್ರಾಮದಲ್ಲಿ...
ನಾಯಕನಹಟ್ಟಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಕಳೆದ 8 ವರ್ಷಗಳಿಂದ ಶೂನ್ಯದಿಂದ ಆರು ವರ್ಷ ವಯೋಮಾನದ ಮಕ್ಕಳಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ, ಲಾಲನೆ - ಪಾಲನೆ ಕೇಂದ್ರಗಳನ್ನು ಶಾಲಾ ಪೂರ್ವ ಶಿಕ್ಷಣ ಮಾಡಲಾಗುತ್ತಿದೆ. ಆದರೆ ಅಂಗನವಾಡಿ ಕೇಂದ್ರಗಳು ಇರುವ ಕಡೆ ಶಿಶು ಪಾಲನ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...